ಹಾಸನದ ವೇದಭಾರತಿ ಮೂರು ವರ್ಷಗಳನ್ನು ಪೂರ್ಣಗೊಳಿಸಿ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. 5.08.2015ರಿಂದ 9.08.2015ರವರೆಗೆ 5 ದಿನಗಳ ಕಾಲ "ಯೋಗ-ವೇದ-ಸಂಸ್ಕೃತ ಸಂಗಮ" ಎಂಬ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮದ ವಿವರ ಹೀಗಿದೆ:
ಪ್ರತಿನಿತ್ಯ ಬೆ. 5.15ರಿಂದ6.30 ಮತ್ತು ಸಾ. 5.30ರಿಂದ 6.30ರವರೆಗೆ ಯೋಗ, ಪ್ರಾಣಾಯಾಮದ ಅಭ್ಯಾಸ - ನುರಿತ ಯೋಗಪಟುಗಳು ಮಾರ್ಗದರ್ಶನ ಮಾಡುವರು.
ಪ್ರತಿನಿತ್ಯ ಬೆ. 6.30ರಿಂದ 7.00 ಮತ್ತು ಸಾ.6.30ರಿಂದ 7.00 - ಅಗ್ನಿಹೋತ್ರ
ಪ್ರತಿನಿತ್ಯ ಬೆ. 7.00ರಿಂದ 8.30 ಮತ್ತು ಸಾ. 7.00ರಿಂದ 8.30 - ಪೂಜ್ಯ ಸ್ವಾಮಿರಾಮರ ಶಿಷ್ಯರಾದ ಗುರೂಜಿ ಪಟ್ಟಾಭಿರಾಮರಿಂದ ಗಾಯತ್ರಿ ಮಹಾಮಂತ್ರದ ಅನುಷ್ಠಾನ, ಮಹತ್ವ, ಪರಿಣಾಮ, ಇತ್ಯಾದಿಗಳ ಕುರಿತು ಉಪನ್ಯಾಸಗಳು.
ಪ್ರತಿನಿತ್ಯ ಬೆ. 8.30ಕ್ಕೆ ಉಪಹಾರದ ವ್ಯವಸ್ಥೆ ಮಾಡಿದೆ.
ಪ್ರತಿದಿನ ಬೆ.11.00ರಿಂದ ಮ.1.00 ಮತ್ತು ಮ.3.00ರಿಂದ 5.00 - ಸಂಸ್ಕೃತ ಸಂಭಾಷಣಾ ಕಲಿಕಾ ಶಿಬಿರವಿರುತ್ತದೆ.
9.08.2015ರ ಸಾ. 5.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾ. 6.00ಕ್ಕೆ ಬೆಂಗಳೂರಿನ ಸಂಗೀತ ವಿದುಷಿ ವಿನಯ ವಿ.ಪ್ರಭು ಮತ್ತು ಬಳಗದವರಿಂದ 'ಭಕ್ತಿ ಸಂಗೀತ' ಕಛೇರಿ ಏರ್ಪಡಿಸಿದೆ.
ಆಸಕ್ತರು ಸದುಪಯೋಗ ಪಡೆಯಬಹುದಾಗಿದೆ. ಎಲ್ಲರಿಗೂ ಆದರದ ಸ್ವಾಗತವಿದೆ.
nageshamysore
ಪ್ರತ್ಯುತ್ತರಅಳಿಸಿಯೋಗ - ವೇದ - ಸಂಸ್ಕೃತ : ಒಂದು ರೀತಿಯಲ್ಲಿ ತ್ರಿವೇಣಿ ಸಂಗಮ!
kavinagaraj
ಧನ್ಯವಾದ, ನಾಗೇಶರೇ.
Nagaraj Bhadra
ಯೋಗ-ವೇದ-ಸಂಸ್ಕೃತ ಈ ಮೂರು ಇಂದಿನ ಯುವ ಪೀಳಿಗೆಗೆ ಅತ್ಯಂತ ಅವಶ್ಯಕತೆಯಿದೆ.ಇವು ಭಾರತದ ಇತಿಹಾಸವು ಬಿಂಬಿಸುತ್ತವೆ.ಒಳ್ಳೆಯ ಕಾರ್ಯಕ್ರಮ ಸರ್.
kavinagaraj
ಧನ್ಯವಾದ, ನಾಗರಾಜಭದ್ರರವರೇ.
swara kamath
ಆತ್ಮೀಯ ಕವಿನಾಗರಾಜರಿಗೆ ನಮಸ್ಕಾರಗಳು.
ಸಮಾನ ಮನಸ್ಕರೆಲ್ಲರೂ ಒಂದೆಡೆ ಸೇರಿ ಹುಟ್ಟುಹಾಕಿದ 'ವೇದಭಾರತಿ'ಗೆ ಈಗ ನಾಲ್ಕರ ಹುಟ್ಟುಹಬ್ಬದ ಸಂಬ್ರಮ.ನಾನು ಸಹ ನಿರಂತರ ವೇದಭಾರತಿಯ ನಡಾವಳಿಗಳನ್ನು ಅದರ ಬ್ಲಾಗ್ ಪೇಜ್ ನಲ್ಲಿ ಓದಿ ಮನಗಂಡಿದ್ದೇನೆ..ದಿನಾಕ 5-8-2015 ರಿಂದ ನಡೆಯಲ್ಪಡುವ ವಿಶೇಷ ಕಾರ್ಯಕ್ರಮವು ಸುಂದರವಾಗಿ ಅತ್ಯಂತ ಯಶಸ್ವಿಯಾಗಿ ಆಚರಿಸಲ್ಪಡಲಿ ಎಂದು ಶುಭಕೋರುತ್ತೇನೆ.
ಮತ್ತೊಮ್ಮೆ ವಂದನೆಗಳು.......ರಮೇಶ ಕಾಮತ್.
kavinagaraj
ಧನ್ಯವಾದಗಳು, ರಮೇಶಕಾಮತರೇ. ವೇದಭಾರತಿಯ ಸಮಾಜಮುಖಿ ಕಾರ್ಯಗಳಿಗೆ ಎಲ್ಲರ ಬೆಂಬಲ ಸಿಗುತ್ತಿರುವುದೂ ನಮಗೆ ಸಂತಸ ತಂದಿದೆ.