ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮಾರ್ಚ್ 12, 2012

ಅಗ್ನಿಹೋತ್ರ: 'ಇದಂ ನ ಮಮ'-ಇದು ನನಗಾಗಿ ಅಲ್ಲ!

     ಅಗ್ನಿಹೋತ್ರ - ಇದು ಸ್ವಹಿತ ಮತ್ತು ಸಮಾಜಹಿತದ ಸಲುವಾಗಿ ಮಾಡಬಹುದಾದ ಒಂದು ಕ್ರಿಯೆ. ಅಗ್ನಿಹೋತ್ರವನ್ನು ಆಚರಿಸಲು ಪ್ರತಿದಿನ ಸೂರ್ಯೋದಯ ಮತ್ತು ಸಾರ್ಯಾಸ್ತ ಕಾಲ ಸೂಕ್ತವಾಗಿದ್ದು ಇದರ ಅರ್ಥಪೂರ್ಣ ಆಚರಣೆಯಿಂದ ಅಂತರಂಗ ಮತ್ತು ಬಹಿರಂಗದ ಶುದ್ಧಿ ಸಾಧ್ಯವೆಂಬುದು ಬಲ್ಲವರ ನುಡಿ. ಹೇಳುವ ಮಂತ್ರಗಳ ಅರ್ಥ ತಿಳಿದು ಉಚ್ಛರಿಸುವುದರಿಂದ ಮತ್ತು ಸೂಕ್ತ ಸಮಿತ್ತುಗಳನ್ನು ಉಪಯೋಗಿಸುವುದರಿಂದ ಒಳ್ಳೆಯದಾಗುವುದು. ಈ ವಿಧಿಯ ಆಚರಣೆಯ ಕ್ರಮಗಳು ಹೀಗಿವೆ:
೧. ಪ್ರಾರಂಭದಲ್ಲಿ ಈಶ್ವರಸ್ತುತಿಪ್ರಾರ್ಥನೆ,
೨. ಆಚಮನ ಮಂತ್ರಗಳು,
೩. ಅಂಗಸ್ಪರ್ಶ ಮಂತ್ರಗಳು,
೪. ಅಗ್ನ್ಯಾಧಾನ ಮಂತ್ರಗಳು,
೫. ಆಗ್ನ್ಯುದ್ದೀಪನ ಮಂತ್ರ,
೬. ಸಮಿದಾಧಾನ ಮಂತ್ರಗಳು,
೭. ಪಂಚ ಘೃತಾಹುತಿ ಮಂತ್ರ,
೮. ಜಲಸೇಚನ ಮಂತ್ರ,
೯. ಆಘಾರಾವಾಜ್ಯ ಭಾಗಾಹುತಿ ಮಂತ್ರಗಳು,
೧೦. ಪ್ರಾತಃಕಾಲದ/ಸಾಯಂಕಾಲದ ಮಂತ್ರಗಳು,
೧೧. ಉಭಯಕಾಲದ ಮಂತ್ರಗಳು,
೧೨. ಪೂರ್ಣಾಹುತಿ ಮಂತ್ರ,
೧೩. ಶಾಂತಿ ಮಂತ್ರ
ಪೌರ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ವಿಶೇಷಾಹುತಿ ಸಂದರ್ಭಗಳಲ್ಲಿ ಹೇಳುವ ಮಂತ್ರ.
      ಇದರಲ್ಲಿ ತಾನಾಗಿಯೇ ಒಣಗಿ ಬಿದ್ದಿರುವ ಸಮಿತ್ತುಗಳು ಮತ್ತು ಔಷಧಯುಕ್ತ ವನಸ್ಪತಿಗಳನ್ನು ಬಳಸುವುದು ಸೂಕ್ತ. ಬೆಂಗಳೂರಿನಲ್ಲಿರುವ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಪ್ರತಿ ಶನಿವಾರ ಸಾಯಂಕಾಲ ೫.೩೦ಕ್ಕೆ ಸರಿಯಾಗಿ ನಡೆಯುವ ಸತ್ಸಂಗದ ಪ್ರಾರಂಭದಲ್ಲಿ ಅಗ್ನಿಹೋತ್ರ ನಡೆಯುತ್ತದೆ. ಸ್ತ್ರೀಯರು ವೇದಮಂತ್ರಗಳನ್ನು ಹೇಳಬಾರದು ಎಂಬ ತಪ್ಪು ಕಲ್ಪನೆ ಪ್ರಚಲಿತವಿರುವಾಗ ಅದು ಸರಿಯಲ್ಲವೆಂದು ಹೇಳುವ ಬದಲು ಕೃತಿಯಲ್ಲಿ ಆಚರಿಸಿ ತೋರಿಸಲೋ ಎಂಬಂತೆ ಇಲ್ಲಿ ಮಹಿಳೆಯರೇ ಅಗ್ನಿಹೋತ್ರ ನಡೆಸುತ್ತಾರೆ. ಅದನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಆಸಕ್ತ ಕೆಲವರಿಗಾದರೂ ಪ್ರೇರಿಸಲು ಈ ಪ್ರಯತ್ನ. 
-ಕ.ವೆಂ.ನಾಗರಾಜ್.


*************

6 ಕಾಮೆಂಟ್‌ಗಳು:

  1. ಇದೀಗ ಮಹಿಳೆಯರ ಮೂಲಕವೂ ಸುಳ್ಳು ಸೃಷ್ಠಿಗಳನ್ನು ನಂಬಿಸುವುದೆ ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುಳ್ಳುಸೃಷ್ಟಿ ಮತ್ತು ಮಹಿಳೆಯರ ಮೂಲಕವೂ ಸುಳ್ಳುಸೃಷ್ಟಿ ಎಂದರೆ ಏನು ಎಂಬ ಬಗ್ಗೆ ದಯಮಾಡಿ ವಿವರಿಸಲು ವಿಶ್ವಾರಾಧ್ಯರಲ್ಲಿ ವಿನಂತಿಯಿದೆ.

      ಅಳಿಸಿ
  2. ಧನ್ಯವಾದಗಳು. ತಾವು ಮಂತ್ರಗಳನ್ನೂ ನಮೂದಿಸಿದ್ದರೆ ಇನ್ನೂ ಮೆರಗು ಬರುತ್ತಿತ್ತು.

    ಪ್ರತ್ಯುತ್ತರಅಳಿಸಿ