ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜುಲೈ 20, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ - 7

     ಶಾಸ್ತ್ರೀಯ ಔದಾರ್ಯ ಇದಕ್ಕಿಂತ ಮುಂದೆ ಹೋಗಲಾರದು. ವೇದಗಳು ಜ್ಞಾನಮಯ ತಾನೇ? ಜ್ಞಾನಮಾರ್ಗದಲ್ಲಿ ಅಂಧವಿಶ್ವಾಸಕ್ಕೆ, ಕುರುಡು ನಂಬಿಕೆಗೆ ಎಡೆಯೆಲ್ಲಿ? ಸತ್ಯವೇ ನಿಮ್ಮ ಶಕ್ತಿ, ಅದರ ನೆರವಿಂದಲೇ ಸತ್ಯಾನ್ವೇಷಣಕ್ಕೆ ಮುಂದಣ ಹೆಜ್ಜೆಯಿಡಿರಿ ಎಂದು ಕರೆ ಕೊಡುತ್ತದೆ ಋಗ್ವೇದ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷಃ|| (ಋಕ್.1.86.9)
     [ಸತ್ಯಶವಸಃ] ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ! ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧನ್ಯ ಜೀವರೇ! [ಯೂಯಂ] ನೀವು, [ಮಹಿತ್ವನಾ] ನಿಮ್ಮ ಸ್ವಂತ ಮಹಿಮೆಯಿಂದಲೇ [ತತ್ ಆವಿಷ್ಕರ್ತ] ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. [ರಕ್ಷಃ] ದುಷ್ಕಾಮನೆಯನ್ನು [ವಿದ್ಯುತಾ] ನಿಮ್ಮ ಜ್ಞಾನಜ್ಯೋತಿಯಿಂದ [ವಿಧ್ಯತ] ಸೀಳಿಹಾಕಿರಿ.
     ಒಂದೊಂದು ಮಾತಿನಲ್ಲಿಯೂ ಸ್ಫೂರ್ತಿ ಉಕ್ಕಿ ಬರುತ್ತದೆ. ಹೌದು, ಅಜ್ಞಾನದ ಅಂಧಕಾರ ಕವಿದಿರುವವರೆಗೆ ಆತ್ಮವನ್ನು ಕುಕ್ಕಿ ತಿನ್ನುವ ರಾಕ್ಷಸೀ ಭಾವನೆ ದೂರವಾಗಲಾರದು.

1 ಕಾಮೆಂಟ್‌:

  1. [ದುಷ್ಕಾಮನೆಯನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿಹಾಕಿರಿ]
    ಇಂತಹ ಜ್ಞಾನವು ಸುಮ್ಮನಂತೂ ಸಿಗಲಾರದು. ವೇದದ ತಿರುಳನ್ನು ತಿಳಿಸುವ ಜ್ಞಾನಿಗಳಿಗೆ ಕೊರತೆಯಿದೆಯಲ್ಲಾ! ಅಲ್ಪ ಸ್ವಲ್ಪ ಜ್ಞಾನವನ್ನಾದರೂ ಎಲ್ಲರಿಗೂ ತಿಳಿಸಿರೆಂಬ ಹಂಬಲ ಜಾಸ್ತಿಯಾಗುತ್ತಿದೆ.ಅದಕ್ಕೆ ಓಗೊಡುವ ಕಿವಿಗಳು ಸಾಲದು.

    ಪ್ರತ್ಯುತ್ತರಅಳಿಸಿ