ಹಾಸನದಲ್ಲಿ ನಡೆದ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಸದ್ಬಾವನಾಗೋಷ್ಠಿಯ ನಂತರದಲ್ಲಿ ಬೆಂಗಳೂರಿನ ಡಾ. ಅನಿಲಕುಮಾರರು 'ಶುಲ್ಬಸೂತ್ರೇಷು ಗಣಿತಮ್' ಕುರಿತು ವಿವರಿಸಿದರು. ಆ ಸಂಬಂಧದ ಕೆಲವು ಚಿತ್ರಗಳಿವು:
ಬೆಂಗಳೂರು ಸಂಸ್ಕೃತ ವಿ.ವಿ.ಉ ಕುಲಪತಿ ಡಾ. ಶ್ರೀನಿವಾಸ ವರಖೇಡಿಯವರು 'ದೇಶೀನಾಯಕತ್ವಮ್' ಕುರಿತು ವಿದ್ಯಾರ್ಥಿ ಸಮೂಹದೊಂದಿಗೆ ನಡೆಸಿದ ಸಂವಾದ ಎಲ್ಲರಿಗೂ ಮೆಚ್ಚುಗೆಯಾಯಿತು. ಇಂತಹ ಕಾರ್ಯಕ್ರಮವನ್ನು ಪ್ರತಿ ಶಾಲಾ, ಕಾಲೇಜುಗಳಲ್ಲೂ ನಡೆಸಿದರೆ ಉತ್ತಮ ಪರಿಣಾಮ ಬೀರುವುದೆಂಬ ಅಭಿಪ್ರಾಯ ವ್ಯಕ್ತವಾಯಿತು.
ನಂತರದಲ್ಲಿ ಢಾ. ಶುಭಾರವರು 'ಸಂಸ್ಕೃತ ವಿಕಿಪೀಡಿಯ' ಕುರಿತು ಅಮೂಲ್ಯ ಮಾಹಿತಿಗಳನ್ನು ಸಭೆಗೆ ಪ್ರಾತ್ಯಕ್ಞಿಕೆ ಮೂಲಕ ವಿವರಿಸಿದರು. ಡಾ. ಗುರುಮೂರ್ತಿಯವರು 'ಸಂಸ್ಕೃತದ ಪ್ರಸ್ತುತತೆ' ಕುರಿತು ಮಾತನಾಡಿದರು. ಶ್ರೀ ಅನಂತನಾರಾಯಣ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ