ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮಾರ್ಚ್ 11, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 10


     ಜಿಲ್ಲಾ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಸ್ಕೃತ ಭಾರತಿಯ ಅಧ್ಯಕ್ಷರಾದ ಡಾ. ಪ್ರಸನ್ನ ಎನ್.ರಾವ್ ರವರು ಸಮ್ಮೇಳನ ಯಶಸ್ವಿಯಾಗಿ ನಡೆದ ಕುರಿತು ಹರ್ಷ ವ್ಯಕ್ತಪಡಿಸಿದರು. ಸಂಸ್ಕೃತದ ಅಧ್ಯಯನದಿಂದ ನಮ್ಮ ಸಂಸ್ಕೃತಿ ಉನ್ನತಿ ಕಾಣುವುದೆಂದು ಅವರು ಅಭಿಪ್ರಾಯಿಸಿದರು.


     ಸಂಸ್ಕೃತ ಶಿಕ್ಷಣ ನೀಡುವಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಹಲವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಚ್ಚುಕಟ್ಟಾಗಿ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ ಅಡಿಗೆ ಕಂಟ್ರಾಕ್ಟರ್ ವೆಂಕಟೇಶರನ್ನು ಅಭಿನಂದಿಸಲಾಯಿತು.





     ಸಮ್ಮೇಳನದ ಯಶಸ್ಸಿಗೆ ಶ್ರಮ ವಹಿಸಿ ದುಡಿದ ಸಂಸ್ಕೃತ ಭಾರತಿಯ ದಕ್ಷಿಣ ಕರ್ನಾಟಕದ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಮತ್ತು ವೇದಭಾರತಿಯ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಂಘಟನೆ ಮಾಡಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದ ರಕ್ಷಿತ್ ಭಾರದ್ವಾಜರನ್ನೂ ಅಭಿನಂದಿಸಲಾಯಿತು. ಹರಿಹರಪುರ ಶ್ರೀಧರ್ ಸಮ್ಮೇಳನದ ಯಶಸ್ಸಿಗೆ ಸಂಬಂಧಿಸಿದ ಎಲ್ಲರ ಸಂಘಟಿತ ಪ್ರಯತ್ನ ಕಾರಣವಾಗಿದೆಯೆಂದು ನುಡಿದರು. ವಂದೇಮಾತರಮ್ ನೊಂದಿಗೆ ಸಭಾಕಾರ್ಯಕ್ರಮ ಸಂಪನ್ನಗೊಂಡಿತು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. Varada Hegde
    very nice. abhinandanegalu hariharapura shridhar aavarige.

    Hariharapura Sridhar
    ಕವಿನಾಗರಾಜರೇನೋ ಪ್ರೀತಿಯಿಂದ ನನ್ನ ಫೋಟೋ ಹಾಕಿದ್ದಾರೆ.ಆದರೆ ನನಗೆ ಆ ಸಮಯದಲ್ಲಿ ಬೇಕಾಗಿದ್ದು ಶಾಲಲ್ಲ. ಕಾರ್ಯಕ್ರಮದ ವ್ಯವಸ್ಥೆಗೆ ಹಣ! ವಾಗ್ಧಾನ ಮಾಡಿದವರಿಗೆಲ್ಲಾ ಫೋನ್ ಮಾಡುವ ಚಿಂತೆಯಲ್ಲಿ ನಾನಿದ್ದೆ. ಹೊದಿಸಿದ ಶಾಲು ,ಕೊಟ್ಟ ಹಣ್ಣು ಎಲ್ಲಿ ಹೋಯ್ತೋ ನನಗೆ ಗೊತ್ತಿಲ್ಲ. ಚಿತ್ರ ಉಳಿದಿದೆ!!!!!

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Manjunatha Gandasi Satyanarayana
      ಅನ್ಯರ ವೀಕ್ಷಣೆಗೆ ದಾಖಲಾಗುವುದು ಚಿತ್ರವೇ. ಅದಕ್ಕೇ ಹಾಕಿದ್ದಾರೆ. ವೇದಭಾರತೀ ಅಧ್ಯಕ್ಷರಾಗಿ ಸಂತಸ ಹಂಚಿಕೊಂಡಿದ್ದಾರೆ. ಸಲ್ಲಬೇಕಾದ್ದೆ.

      ಅಳಿಸಿ