ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮೇ 24, 2010

ಮೊದಲ ತೊದಲು

ವೇದಗಳು ಜಗತ್ತಿಗೆ ಭಾರತವು ನೀಡಿದ ಅತ್ಯಮೂಲ್ಯ ಕೊಡುಗೆ.ವಿವಿದತೆಯಲ್ಲಿ ಸಮರಸತೆಯನ್ನು ಕಾಣುವ ದಿವ್ಯ ಸಂಸ್ಕೃತಿಗೆ ವೇದಗಳೇ ಮೂಲವೆಂಬುದು ಸರಿಯಾದ ಮಾತು.ವೇದಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕುರಿತು ಅನೇಕ ಸಹೃದಯರು ಪ್ರಯತ್ನಶೀಲರಾಗಿದ್ದಾರೆ. ಅವರುಗಳ ಪ್ರಯತ್ನಕ್ಕೆ ಮೂರಕವಾಗಿ ವೇದಗಳ ಬಗ್ಗೆ ಪ್ರಾಜ್ಞರು ಹೇಳಿರುವ ವಿಚಾರಗಳನ್ನು ತಮ್ಮ ಮುಂದಿಡುವ ಸಲುವಾಗಿ ಮತ್ತು ಆ ಮೂಲಕ ಅಳಿಲು ಸೇವೆ ಸಲ್ಲಿಸುವ ಸಲುವಾಗಿ ಈ ತಾಣ ಮೀಸಲಿದೆ.ತಮ್ಮ ಸಲಹೆ, ಸೂಚನೆ, ಟೀಕೆಗಳಿಗೆ ಮುಕ್ತ ಸ್ವಾಗತ!

ಪ್ರಾರಂಭಿಕವಾಗಿ 'ವೇದೋಕ್ತ ಜೀವನ ಫಥ'ದ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರು ಹೇಳಿರುವ ಸಂಗತಿಗಳನ್ನು ತಮ್ಮ ಮುಂದಿಡಲಾಗುತ್ತಿದೆ.ಪಂ. ಸುಧಾಕರ ಚತುರ್ವೇದಿಯವರು ನಾಲ್ಕು ವೇದಗಳನ್ನು ಸತತ ಇಪ್ಪತ್ತೈದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದವರು.ಉತ್ತಮ ವಾಗ್ಮಿಗಳು, ಬ್ರಹ್ಮಚರ್ಯ ವ್ತತ ಪಾಲಕರು. ತಮ್ಮ ಸಾಧನೆಗಾಗಿ ಸಾರ್ವದೇಶಿಕ ಆರ್ಯ ಪ್ರತಿನಿಧಿ ಸಭೆಯಿಂದ 'ಚತರ್ವೇದೀ' ಎಂಬ ಉಪಾಧಿ ಪಡೆದವರು.ವೇದಗಳ ಬಗ್ಗೆ ಸಾಧಾರವಾಗಿ ಮತ್ತು ಧೃಢವಾಗಿ ವಿಷಯ ಮಂಡನೆ ಮಾಡಬಲ್ಲವರು ಮತ್ತು ಸಂದೇಹಗಳನ್ನು ಸಮರ್ಥವಾಗಿ ವಿವರಣೆ ಕೊಟ್ಟು ಪರಿಹರಿಸಬಲ್ಲವರು.ಬನ್ನಿ, ವೇದ ಹೇಳಿದ ಜೀವನದ ಬಗ್ಗೆ ಅವರೇನು ಹೇಳಿದ್ದಾರೆ, ಹಂತ ಹಂತವಾಗಿ ನೋಡೋಣ!

2 ಕಾಮೆಂಟ್‌ಗಳು:

  1. ನಾಗರಾಜ್,
    "ವೇದಜೀವನ" ತಾಣದ ಶುಭಾರಂಭದಿಂದ ಸಂತಸವಾಗಿದೆ. ನನ್ನ ಕೆಲಸ ಸುಲಭವಾಯ್ತು.ನಿಮ್ಮ ತಾಣದ ಕೊಂಡಿಯನ್ನು ನನ್ನ ಬ್ಲಾಗನಲ್ಲಿ ಕೊಡುವೆ.ಪಂ.ಸುಧಾಕರಚತುರ್ವೇದಿಗಳು ಒಂದುಶತಮಾನದಿಂದ ವೇದಾಧ್ಯಯನ ಮಾಡುತ್ತಿರುವ ಮಹಾನ್ ವ್ಯಕ್ತಿಗಳು. ಅವರ ಮಾತುಗಳನ್ನು ಓದಿಸಲಿರುವ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ