ದಿನಾಂಕ 13-06-2012ರಂದು ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರನ್ನು ನನ್ನ ಕೆಲವು ಸಂಶಯಗಳಿಗೆ ಉತ್ತರ ಪಡೆಯುವ ಸಲುವಾಗಿ ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಕೇಳಿದ್ದ ಒಂದು ಪ್ರಶ್ನೆ ಇದು:
"ಶರ್ಮಾಜಿ, ಜೀವಾತ್ಮ, ಪರಮಾತ್ಮ ಮತ್ತು ಜಡ ಪ್ರಕೃತಿ - ಈ ಮೂರೂ ಸಂಗತಿಗಳು ಅನಾದಿ, ಅನಂತ ಮತ್ತು ಶಾಶ್ವತವಾದವುಗಳು ಎಂದು ಹೇಳುತ್ತಾರೆ. ಜೀವಾತ್ಮ ಸ್ವತಃ ಅನಾದಿ, ಅನಂತ ಮತ್ತು ಶಾಶ್ವತವಾಗಿರುವಾಗ ಪರಮಾತ್ಮನನ್ನು ಏಕೆ ಪೂಜಿಸಬೇಕು? ಆ ಪರಮಾತ್ಮನಿಗೆ ಜೀವಾತ್ಮರ ಮೇಲೆ ಯಾವ ರೀತಿಯ ಅಧಿಕಾರವಿದೆ? ಈ ವಿಚಾರದಲ್ಲಿ ಬೆಳಕು ಚೆಲ್ಲುವಿರಾ?"
ಶರ್ಮರವರು ನೀಡಿದ ಉತ್ತರವನ್ನು ಅವರ ಧ್ವನಿಯಲ್ಲೇ ಕೇಳಿ:
ವಿಡಿಯೋ ನೋಡುವುದು ಕೆಲವೊಮ್ಮೆ ಪ್ರಯಾಸವಾಗುತ್ತದೆ. ಹರಿಹರಪುರ ಶ್ರೀಧರ್ ಇದನ್ನು ಆಡಿಯೋ ಆಗಿ ಪರಿವರ್ತಿಸಿದ್ದಾರೆ. ಇಗೋ ಕೇಳಿ:
ಆತ್ಮೀಯ ನಾಗರಾಜ್,
ಪ್ರತ್ಯುತ್ತರಅಳಿಸಿನನಗೆ ಆಡಿಯೋ ಲಿಂಕ್ ಸರಿಯಾಗಿ ಬರುತ್ತಿಲ್ಲ, ಇನ್ನೊಮ್ಮೆ ಕಳುಹಿಸಿ ಪ್ಲೀಸ್.
ಪ್ರಕಾಶ್
ಆತ್ಮೀಯ ಪ್ರಕಾಶ್, ಮತ್ತೊಮ್ಮೆ ಮೇಲ್ ಮಾಡಿರುವೆ. ಲಿಂಕ್ ಸಿಗದಿದ್ದಲ್ಲಿ ನನ್ನ 'ವೇದಜೀವನ' ಬ್ಲಾಗಿಗೆ ನೇರವಾಗಿ ಭೇಟಿ ಕೊಡಲು ಕೋರುವೆ.
ಪ್ರತ್ಯುತ್ತರಅಳಿಸಿ-ನಾಗರಾಜ್.