ಅಲ್ಪ ಶಕ್ತ ಜೀವಾತ್ಮನಿಗೆ ಯಾವುದೇ ಕ್ರಿಯೆ ಮಾಡಲು ಶರೀರವೆಂಬ ಮಾಧ್ಯಮದ ಅಗತ್ಯವಿದೆ, ಅದು ಮಾಧ್ಯಮದ ಸಹಾಯವಿಲ್ಲದೆ ತಾನೇ ತಾನಾಗಿ ಏನೂ ಮಾಡಲಾರದು ಎಂದು ತಿಳಿದವರು ಹೇಳುತ್ತಾರೆ. ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆಯಿರುವವರು. ಹಿಂದಿನ ಜನ್ಮದ ಮಾತಾ-ಪಿತರೇ ಇನ್ನೊಂದು ಜನ್ಮದ ಮಾತಾ-ಪಿತೃಗಳಾಗಲಾರರು. ತಂದೆ-ತಾಯಿಯರ ಗುಣ ವಿಶೇಷಗಳೇ ಮಕ್ಕಳಿಗೆ ಇರದಿರುವುದು, ಎಲ್ಲಾ ಮಕ್ಕಳೂ ಒಂದೇ ಸ್ವಭಾವದವರಾಗದಿರುವುದು, ಕುಟುಂಬದ ಸದಸ್ಯರುಗಳಲ್ಲಿ ಹೊಂದಾಣಿಕೆಯ ಕೊರತೆ ಕಾಣುವುದು, ಇತ್ಯಾದಿ ಅಂಶಗಳು ಪುನರ್ಜನ್ಮದ ನಂಬಿಕೆಗೆ ಪೂರಕವಾಗಿವೆ. ಹಿಂದಿನ ಜನ್ಮದಲ್ಲಿ ಸಂಬಂಧಿಗಳಾಗಿದ್ದವರು ಈ ಜನ್ಮದಲ್ಲೂ ಸಂಬಂಧಿಗಳಾಗಿದ್ದರೆ ಪರಸ್ಪರರಲ್ಲಿ ಮಧುರ ಸಂಬಂಧವಿರುತ್ತದೆ ಎಂದು ಹೇಳುತ್ತಾರೆ. ಇದೇನೇ ಇದ್ದರೂ ಕೆಲವು ಗುಣಗಳು ಅನುವಂಶಿಕವಾಗಿ ಬರುವುದನ್ನೂ ಕಾಣುತ್ತೇವೆ. ಸಂಬಂಧಗಳು, ಅದರಲ್ಲೂ ರಕ್ತ ಸಂಬಂಧಿಗಳ ನಡುವಣ ಸಂಬಂಧಗಳು ಚೆನ್ನಾಗಿರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಈ ಹಿನ್ನೆಲೆಯಲ್ಲಿ ರಕ್ತ ಸಂಬಂಧಗಳು ಮತ್ತು ಜೀವಾತ್ಮರ ಸಂಬಂಧದ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರನ್ನು ವಿಚಾರಿಸಿದಾಗ ಅವರು ಕೊಟ್ಟ ಉತ್ತರ ಈ ವಿಡಿಯೋ ತುಣುಕಿನಲ್ಲಿದೆ:
ಮಾಹಿತಿಗೆ: ಅನುಭವ ಮತ್ತು ತಾಂತ್ರಿಕ ಕೌಶಲ್ಯವಿರದ ಕಾರಣ ಕೈತಪ್ಪಿನಿಂದ ಒಂದಾಗಿದ್ದ ವಿಡಿಯೋ ಎರಡಾಗಿ
ಮಾಹಿತಿಗೆ: ಅನುಭವ ಮತ್ತು ತಾಂತ್ರಿಕ ಕೌಶಲ್ಯವಿರದ ಕಾರಣ ಕೈತಪ್ಪಿನಿಂದ ಒಂದಾಗಿದ್ದ ವಿಡಿಯೋ ಎರಡಾಗಿ
ವಿಭಜಿತಗೊಂಡಿದೆ. ಕೂಡಿಸಲು ನನಗೆ ಬಾರದು. ನೋಡುಗರು/ಕೇಳುಗರು ಅನುಸರಿಸಿಕೊಳ್ಳಬೇಕು.
ಮಿತ್ರ ಶ್ರೀಧರ್ ವಿಡಿಯೋವನ್ನು ಆಡಿಯೋ ಆಗಿ ಪರಿವರ್ತಿಸಿಕೊಟ್ಟಿದ್ದಾರೆ. ಆಡಿಯೋ ಕೇಳುವುದು ಸುಲಭ.
ಅವರಿಗೆ ವಂದನೆಗಳು.
ಮಿತ್ರ ಶ್ರೀಧರ್ ವಿಡಿಯೋವನ್ನು ಆಡಿಯೋ ಆಗಿ ಪರಿವರ್ತಿಸಿಕೊಟ್ಟಿದ್ದಾರೆ. ಆಡಿಯೋ ಕೇಳುವುದು ಸುಲಭ.
ಅವರಿಗೆ ವಂದನೆಗಳು.
-ಕ.ವೆಂ.ನಾಗರಾಜ್.
ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಬಹಳ ಸೂಕ್ಷ್ಮವಾಗಿ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ, ಆಧ್ಯಾತ್ಮಿಕ ನೆಲೆಯಲ್ಲಿ ಪ್ರಸ್ತುತ ಪಡಿಸಿದ ರೀತಿ ಬಹಳ ತನ್ಮಯರಾಗಿ ಕೇಳುವಂತಿದೆ..ಶ್ರೀಯುತರು ತಮ್ಮ ದಿವ್ಯ ಅನುಭವದಿಂದ ಬಹಳ ಸರಳವಾಗಿ ಅರ್ಥಪಡಿಸಿದ್ದಾರೆ. ಇದನ್ನು ನಮಗೆ ಒದಗಿಸಿದಕ್ಕೆ ನಿಮಗೆ ಅನಂತ ಧನ್ಯವಾದಗಳು...
ಪ್ರತ್ಯುತ್ತರಅಳಿಸಿವಂದನೆಗಳು ಸವಿತಾ ಸೋಮಯಾಜಿಯವರೇ.
ಪ್ರತ್ಯುತ್ತರಅಳಿಸಿ