ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜೂನ್ 9, 2011

'ಮೂಢ ಉವಾಚ' ಕೃತಿಯ ಬಿಡುಗಡೆ

     ದಿನಾಂಕ ೩೦-೦೧-೨೦೧೧ರಂದು 'ವೇದಸುಧೆ' ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವ ಹಾಗೂ 'ಮನೆಮನೆ ಕವಿಗೋಷ್ಠಿಯ' ೧೪ನೆಯ ವರ್ಷದ ವಾರ್ಷಿಕೋತ್ಸವ ಹಾಸನದಲ್ಲಿ ಜರುಗಿತು. ಬೆಳಿಗ್ಗೆ ನಡೆದ ವೇದಸುಧೆಯ ವಾರ್ಷಿಕೋತ್ಸವದ ಕುರಿತು ಈಗಾಗಲೇ ವಿಸ್ತೃತ ವರದಿಗಳನ್ನು ವೇದಸುಧೆ ತಾಣದಲ್ಲಿ ಕೊಡಲಾಗಿದೆ. ಅಂದೇ ಅಪರಾಹ್ನ ಮನೆಮನೆ ಕವಿಗೋಷ್ಠಿಯ ೧೪ನೆಯ ವಾರ್ಷಿಕೋತ್ಸವ ಜರುಗಿದ್ದು, ಆ ಸಂದರ್ಭದಲ್ಲಿ ನನ್ನ ಕೆಲವು ಮುಕ್ತಕಗಳ ಸಂಗ್ರಹ 'ಮೂಢ ಉವಾಚ' ಹಾಗೂ ಕೊಟ್ರೇಶ ಉಪ್ಪಾರರ 'ಮೃತ್ಯುವಿನಾಚೆಯ ಬದುಕು' ಎಂಬ ಕವನ ಸಂಕಲನಗಳ ಬಿಡುಗಡೆಯಾಯಿತು. ವಿದ್ಯುಚ್ಛಕ್ತಿಯ ತೊಂದರೆ, ಶ್ರೀ ಶಂಕರಮಠದ ವ್ಯವಸ್ಥಾಪಕರ ಅಸಹಕಾರ ಹಾಗೂ ನನ್ನ ಮುಂದಾಲೋಚನೆಯ ಕೊರತೆಯ ಕಾರಣದಿಂದ ಕತ್ತಲೆಯಲ್ಲೇ ಕಾರ್ಯಕ್ರಮ ಜರುಗಬೇಕಾಯಿತು. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕಾರವಾರ ಆಕಾಶವಾಣಿಯ ಮುಖ್ಯಸ್ಥರಾದ ಶ್ರೀ ವಸಂತಕುಮಾರ ಪೆರ್ಲರವರು ಶ್ರೀ ಕೊಟ್ರೇಶ ಉಪ್ಪಾರರ ಕೃತಿ 'ಮೃತ್ಯುವಿನಾಚೆಯ ಬದುಕು' ಬಿಡುಗಡೆ ಮಾಡಿದರೆ ಹಾಸನ ಆಕಾಶವಾಣಿಯ ಪ್ರಭಾರ ಮುಖ್ಯಸ್ಥರಾಗಿದ್ದ ಶ್ರೀಮತಿ ಉಷಾಲತಾರವರು ನನ್ನ 'ಮೂಢ ಉವಾಚ' ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಆ ಸಂದರ್ಭದ ಕೆಲವು ದೃಷ್ಯಗಳನ್ನು ಇಲ್ಲಿ ಕೊಟ್ಟಿದೆ.


ವೇದಿಕಯಲ್ಲಿ: ಶ್ರೀ/ಶ್ರೀಮತಿಯರಾದ: ಕೊಟ್ರೇಶ ಉಪ್ಪಾರ, ಕವಿ ನಾಗರಾಜ, ವಸಂತಕುಮಾರ ಪೆರ್ಲ, ಸುಧಾಕರಶರ್ಮ, ಶೀಟಿ, ಉಷಾಲತಾ
ಸಸಿಗೆ ನೀರೆರೆದು ಕಾರ್ಯಕ್ರಮದ ಉದ್ಘಾಟನೆ

                           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ