ದಿನಾಂಕ 29-01-2011ರಂದು ಹಾಸನದ ಶ್ರೀ ಶಂಕರಮಠದ ಆವರಣದಲ್ಲಿ ('ವೇದಸುಧೆ' ಅಂತರ್ಜಾಲತಾಣದ ವಾರ್ಷಿಕೋತ್ಸವದ ಮುನ್ನಾದಿನ) ಹಾಸನದ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ವತಿಯಿಂದ 'ಸಾರ್ವಜನಿಕ ಜೀವನ ಮತ್ತು ವೇದ' ಎಂಬ ವಿಚಾರದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರಶರ್ಮರಿಂದ ಉಪನ್ಯಾಸ ಏರ್ಪಾಡಾಗಿತ್ತು. ಅದಕ್ಕೆ ಮುನ್ನ 'ಅಗ್ನಿಹೋತ್ರ' ಮಾಡುವ ಕುರಿತು ಪ್ರಾತ್ಯಕ್ಷಿಕೆ ಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾನು, ನನ್ನ ಪತ್ನಿ ಭಾರತಿ ಸೇರಿದಂತೆ ನಾಲ್ವರು ದಂಪತಿಗಳು ಭಾಗವಹಿಸಿದ್ದೆವು. ಅಗ್ನಿಹೋತ್ರದ ಮಹತ್ವ ತಿಳಿಸಿದ ಶ್ರೀ ಶರ್ಮರು ಪ್ರತಿ ಮಂತ್ರದ ಅರ್ಥ ವಿವರಿಸಿ ಹೇಳಿದ್ದು ಎಲ್ಲರ ಮನಕ್ಕೆ ತಲುಪುವಂತಿತ್ತು. ಆ ಸಂದರ್ಭದ ಕೆಲವು ದೃಶ್ಯಗಳು:
ಸಮಯಾವಕಾಶವನ್ನು ಮಾಡಿಕೊಂಡು ವಾರ್ಷಿಕೋತ್ಸವದ ಒಂದಿಷ್ಟು ಆಡಿಯೋ ವೀಡಿಯೋ ಗಳನ್ನೂ ಹಾಕೋಣ.ಸಧ್ಯ ಸಮಯದ ಅಭಾವವಿದೆ.
ಪ್ರತ್ಯುತ್ತರಅಳಿಸಿHaageye aagali.
ಪ್ರತ್ಯುತ್ತರಅಳಿಸಿಹಾಸನದಲ್ಲಿ ನಡೆದಿರುವ ಕಾರ್ಯಕ್ರಮವನ್ನು ಬ್ಲಾಗ್ ಮೂಲಕ ಎಲ್ಲರಿಗೂ ತಲುಪಿಸುವ ನಿಮ್ಮ ಪ್ರಯತ್ನ ಸ್ತುತ್ಯಾರ್ಹ. ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿಧನ್ಯವಾದಗಳು, ಪ್ರಭಾಮಣಿ ನಾಗರಾಜರೇ.
ಪ್ರತ್ಯುತ್ತರಅಳಿಸಿ