ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜೂನ್ 17, 2010

ವೇದೋಕ್ತ ಜೀವನ ಪಥ -ಜೀವನ ಬುನಾದಿ - ೩








     ಹೀಗೆ ತರ್ಕಿಸಿ ಚಿಂತನಶೀಲರಾದಾಗ ಯಾವುದೋ ಒಂದು ದಿವ್ಯ ನಿಮಿತ್ತದ ಕಡೆ ನಮ್ಮ ದೃಷ್ಟಿ ಹೊರಳುತ್ತದೆ. ನಮ್ಮ ಆಧ್ಯಾತ್ಮಿಕ - ಭೌತಿಕ ವಿಕಾಸಗಳೆರಡಕ್ಕೂ ನೆರವಾಗುವ ಪೂರ್ಣ ನಿರ್ದೋಷವಾದ ದಿವ್ಯ ನೈಮಿತ್ತಿಕ ಜ್ಞಾನವನ್ನು ನಮಗೆ ನೀಡಬಲ್ಲ ದಿವ್ಯನಿಮಿತ್ತ ಸರ್ವಜ್ಞನಾದ ಪರಮಾತ್ಮನನ್ನು ಬಿಟ್ಟರೆ ಬೇರಾವುದೂ ಇಲ್ಲ. ವಸ್ತುತಃ ನಮ್ಮೆಲ್ಲರ ಪ್ರಭುವಾದ, ಆ ಸರ್ವಜ್ಞ ಪರಮಾತ್ಮನೇ ಸದಿವ್ಯನಿಮಿತ್ತವಾಗಿ ಸೃಷ್ಟಿಯ ಆದಿಯಲ್ಲಿ ದಿವ್ಯ ನೈಮಿತ್ತಕ ಜ್ಞಾನವನ್ನು ಕರುಣಿಸಿದ್ದಾನೆ. ಆ ದಿವ್ಯ ನೈಮಿತ್ತಕ ಜ್ಞಾನದ ಅಮೂಲ್ಯ ನಿಧಿಗಳೇ, ಅಖಂಡ ಭಂಡಾರಗಳೇ ಚತುರ್ವೇದಗಳು. ಸ್ವತಃ ಋಗ್ವೇದವೇ ಮೊಳಗುತ್ತಲಿದೆ:-
ಆಪ್ರಾ ರಜಾಂಸಿ ದಿವ್ಯಾನಿ ಪಾರ್ಥಿವಾ ಶ್ಲೋಕಂ
ದೇವಃ ಕೃಣುತೇ ಸ್ವಾಯ ಧರ್ಮಣೇ
ಪ್ರ ಬಾಹೂ ಅಸ್ರಾಕ್ ಸವಿತಾ ಸವೀಮನಿ ನಿವೇಶಯನ್ ಪ್ರಸುವನ್ನಕ್ತುಭಿಜರ್ಗತ್
(ಋಕ್. ೪.೫೩.೩)
     [ದೇವಃ] ಪ್ರಕಾಶಮಯನೂ, ಸರ್ವದಾತೃವೂ ಆದ ಭಗವಂತನು, [ದಿವ್ಯಾನಿ ಪಾರ್ಥಿವಾ ರಜಾಂಸಿ] ದಿವ್ಯಲೋಕಗಳಲ್ಲಿಯೂ, ಮೃಣ್ಮಯವಾದ ಲೋಕಗಳಲ್ಲಿಯೂ, [ಆಪ್ರಾಃ] ವ್ಯಾಪಕನಾಗಿದ್ದಾನೆ. [ಸ್ವಾಯಧರ್ಮಣೇ] ತನ್ನ ಧರ್ಮದ ಪ್ರಕಾಶನಕ್ಕಾಗಿ, [ಶ್ಲೋಕಂ ಕೃಣುತೇ] ಮಂತ್ರಸಮೂಹವನ್ನು ಪ್ರಕಟಪಡಿಸುತ್ತಾನೆ. [ಸವಿತಾ] ಸರ್ವೋತ್ಪಾದಕನೂ, ಸರ್ವಪ್ರೇರಕನೂ ಆದ ಭಗವಂತನು [ಸವೀಮನಿ] ಸೃಷ್ಟಿಯಲ್ಲಿ [ಜಗತ್]ನಲೋಕವನ್ನು [ಅಕ್ಷುಭಿಃ] ಸ್ಫುಟ ಲಕ್ಷಣಗಳೊಂದಿಗ್ದಿಗೆ [ನಿವೇಶಯನ್] ನೆಲೆಗೊಳಿಸುತ್ತಾ [ಪ್ರಸುವನ್] ಉತ್ಪಾದಿಸುತ್ತಾ [ಬಾಹೂ ಪ್ರ ಅಸ್ರಾಕ್] ತನ್ನ ಉತ್ಪಾದನ, ಪಾಲನ ಸಾಮರ್ಥ್ಯಗಳನ್ನು ವ್ಯಕ್ತಪಡಿಸುತ್ತಾನೆ. ಇದು ಬುದ್ಧಿಗಮ್ಯವಾದ ಘೋಷಣೆಯೇ ಸರಿ. ಶಾಸನಗಳನ್ನೇ ಪ್ರಕಾಶಪಡಿಸದೆ ಯಾವನಾದರೂ ಶಾಸಕನು ಪ್ರಜೆಗಳನ್ನು ದಂಡಿಸತೊಡಗಿದರೆ ಅದನ್ನು ಉಚಿತವೆನ್ನಲಾದೀತೆ? ಜಗತ್ಸಾಮ್ರಾಟನಾದ ಭಗವಂತನು ಆದಿಯಲ್ಲಿಯೇ ವಿಧಿ - ನಿಷೇದಗಳನ್ನು ವ್ಯಕ್ತಪಡಿಸದೆ, ಸತ್ಯಾಸತ್ಯ - ಪಾಪಪುಣ್ಯ - ಧರ್ಮಾಧರ್ಮಗಳ ವಿಧಾನವನ್ನೇ ವ್ಯಕ್ತಗೊಳಿಸದೆ ಜೀವಾತ್ಮರನ್ನು ಅಪರಾಧಿಗಳು - ನಿರಪರಾಧಿಗಳು ಎಂದು ವಿಭಜಿಸಲು ಸಾಧ್ಯವೇ? ಅದು ಸಾಧುವೇ?

2 ಕಾಮೆಂಟ್‌ಗಳು:

  1. [ಆ ದಿವ್ಯ ನೈಮಿತ್ತಕ ಜ್ಞಾನದ ಅಮೂಲ್ಯ ನಿಧಿಗಳೇ, ಅಖಂಡ ಭಂಡಾರಗಳೇ ಚತುರ್ವೇದಗಳು]
    ವೇದದ ಜ್ಞಾನವನ್ನು ಸರಳವಾಗಿ ತಿಳಿಸಿಕೊಡುವವರೇ ದುರ್ಲಭವಾಗಿದ್ದಾರೆ.ವೇದದ ವಿಚಾರದಲ್ಲಿ ಎರಡು ವಿಪರೀತಗಳನ್ನು ನಾನು ಗಮನಿಸುತ್ತಿರುವೆ.ಸಸ್ವರವಾಗಿ ವೇದಮಂತ್ರಗಳನ್ನು ಹೇಳುವ ಬಹುಪಾಲು ಜನ ಅದನ್ನು ಒಂದುವರ್ಗಕ್ಕೆ ಸೀಮಿತಗೊಳಿಸಿದ್ದಾರೆ. ವೇದವನ್ನು ಒಪ್ಪುವ ಆರ್ಯಸಮಾಜಿಗಳು ಬೇರೆ ಯಾವುದೇ ಪೂಜೆ ಪುನಸ್ಕಾರಗಳನ್ನು ಒಪ್ಪುವುದಿಲ್ಲ.ವಿಗ್ರಹಾರಾಧನೆ ಎಂದರೆ ಕೆಂಡಾಮಂಡಲವಾಗುತ್ತಾರೆ.ಇನ್ನು ನಮ್ಮಂತವರು ಎಡಬಿಡಂಗಿಗಳು. ಆದರೂ ಈ ರೀತಿಯ ಒಂದು ಮೂರನೆಯ ವರ್ಗ ನಿರ್ಮಾಣದ ಅವಶ್ಯಕತೆ ಇದೆ....ಅದೆಂದರೆ ವೇದವನ್ನು ಒಪ್ಪುವ ಜೊತೆಗೆ ಈಗಾಗಲೇ ನಡೆದುಬಂದಿರುವ ಸಂಪ್ರದಾಯಗಳಲ್ಲಿ ಯಾವುದು ಸಮಾಜಕ್ಕೆ ಮಾರಕವಲ್ಲವೋ ಅದನ್ನೂ ಉಳಿಸಿಕೊಂಡು ಹೋಗುವುದು. ಏನಂತೀರಾ?

    ಪ್ರತ್ಯುತ್ತರಅಳಿಸಿ