ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 27, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 2

ಜಯತು ಸಂಸ್ಕೃತಮ್ - ಜಯತು ಮನುಕುಲಮ್ - ಜಯತು ಭಾರತಮ್!
ವಿಶೇಷ ಪ್ರದರ್ಶಿನಿ:
     ಸಂಸ್ಕೃತ ಸಮ್ಮೇಳನದ ಅಂಗವಾಗಿ ನಡೆದ ಶೋಭಾಯಾತ್ರೆ ಸರಿಯಾಗಿ ಬೆ. 9.30ಕ್ಕೆ ಸಭಾಸ್ಥಳಕ್ಕೆ ತಲುಪಿತು. ಆಗಮಿಸಿದ್ದ ಗಣ್ಯರುಗಳಿಂದ ಸಂಸ್ಕೃತದ ಹಿರಿಮೆ ಎತ್ತಿ ಹಿಡಿಯುವ ಪ್ರದರ್ಶಿನಿಯನ್ನು ಉದ್ಘಾಟನೆ ಮಾಡಿಸಲಾಯಿತು. ಪ್ರದರ್ಶಿನಿಯಲ್ಲಿ ವಿವಿಧ ದಿನಬಳಕೆಯ ವಸ್ತುಗಳಿಗೆ ಸಂಸ್ಕೃತದಲ್ಲಿ ಏನು ಹೇಳುತ್ತಾರೆ ಎಂಬ ಬಗ್ಗೆ ವಿವರಣಾ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಆಯುರ್ವೇದದ ವಿಚಾರಗಳ ಭಿತ್ತಿಫಲಕಗಳು, ಔಷಧೀಯ ಸಸ್ಯಗಳ ಪರಿಚಯ, ಸಂಸ್ಕೃತ ವಿಕಿಪಿಡಿಯದ ಪರಿಚಯ, ಸಂಸ್ಕೃತದ ಹಿಂದಿನ ಗರಿಮೆಯನ್ನು ಎತ್ತಿ ತೋರಿಸುವ ಮಾಹಿತಿಗಳು, ಮುಂತಾಗಿ ಹಲವಾರು ಸಂಗತಿಗಳು ಅಲ್ಲಿ ಪ್ರದರ್ಶಿಸಲ್ಪಟ್ಟಿದ್ದವು. ಸಾವಿರಾರು ಜನರು ಪ್ರದರ್ಶಿನಿಯನ್ನು ವೀಕ್ಷಿಸಿ ಪ್ರೇರಿತರಾದದ್ದು ಸತ್ಯ! ಪ್ರದರ್ಶಿನಿಯ ಕೆಲವು ದೃಷ್ಯಗಳಿವು:ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ