ದಿನಾಂಕ 24.02.2015ರಂದು ಹಾಸನದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನ ವೇದಭಾರತೀ ಮತ್ತು ಸಂಸ್ಕೃತಭಾರತಿಯ ಆಶ್ರಯದಲ್ಲಿ ಬಹು ಯಶಸ್ವಿಯಾಗಿ ನೆರವೇರಿತು. ಬೆಳಿಗ್ಗೆ 9.00 ಗಂಟೆಗೆ ಹೇಮಾವತಿ ಪ್ರತಿಮೆಯ ಬಳಿಯಿಂದ ಸಮಾರಂಭದ ಸ್ಥಳದವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಘೋಷಣಾ ಫಲಕಗಳು, ಕೇಸರಿ ಧ್ವಜಗಳನ್ನು ಹಿಡಿದು ಕುಣಿದು ಕುಪ್ಪಳಿಸಿದ ಯುವ ಸಮೂಹ, ಹಿರಿಯರು, ಮಾತೆಯರಿಂದ ಒಡಗೂಡಿದ ಶೋಭಾಯಾತ್ರೆಯನ್ನು ಗಣ್ಯರುಗಳು ಉದ್ಘಾಟಿಸಿದರು. ಸಂಸ್ಕೃತದ ಪ್ರೇಮ ಗುಪ್ತಗಾಮಿನಿಯಾಗಿ ಇಂದಿಗೂ ಪ್ರವಹಿಸುತ್ತಿರುವುದನ್ನು ಇದು ಎತ್ತಿ ತೋರಿಸಿತು. ಶೋಭಾಯಾತ್ರೆಯ ಕೆಲವು ದೃಷ್ಯಗಳಿವು:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ