ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ
ರಾಮಕೃಷ್ಣರ ಭೀಮ ಶಿಷ್ಯನೆ ವೀರವೇದಾಂತೀ
ಭಾರತಾಂಬೆಯ ಧೀರಪುತ್ರನೆ ಸಾಧು ಭೈರವನೇ
ಸ್ಥೈರ್ಯದಚಲನೆ ಧೈರ್ಯದಂಬುಧಿ ಜಯತು ಜಯ ಜಯತು ||
-ಕುವೆಂಪು.
ಇಂದಿಗೆ ಶ್ರೀ ವಿವೇಕಾನಂದರು ಜನಿಸಿ ೧೫೦ ವರ್ಷಗಳಾಗಿವೆ. ೩೨ನೆಯ ಕಿರಿ
ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಅವರು ತಮ್ಮ ನಡೆ-ನುಡಿಗಳಿಂದ ಇಂದಿಗೂ
ನಮ್ಮೊಡನಿದ್ದಾರೆ. ಅವರ ಕನಸಿನ ಭವ್ಯ ಭಾರತ ನಿರ್ಮಾಣವನ್ನು
ಸಾಕಾರಗೊಳಿಸಲು ಸಂಕಲ್ಪಿಸೋಣ.
ವಿವೇಕವಾಣಿ
ಎಲ್ಲಕ್ಕಿಂತ ಹೆಚ್ಚಾಗಿ, ರಾಜಿಯಾಗುವ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ
ತತ್ವ, ಧ್ಯೇಯಗಳಿಗೆ ಅಂಟಿಕೊಂಡಿರಿ ಮತ್ತು ಬೆಂಬಲಿಗರನ್ನು ಗಳಿಸುವ
ಆಸೆಯಿಂದ, ಇತರರ "ಹುಚ್ಚು ಭ್ರಮೆ"ಗಳೊಡನೆ ಹೊಂದಾಣಿಕೆ
ಮಾಡಿಕೊಳ್ಳಬೇಡಿ. ನಿಮ್ಮ ಆತ್ಮವೇ ವಿಶ್ವಕ್ಕೆ ಆಧಾರವಾಗಿದೆ, ನಿಮಗೆ ಇನ್ನು
ಯಾವ ಆಧಾರದ ಅಗತ್ಯವಿದೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ