ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಡಿಸೆಂಬರ್ 21, 2011

ಲೋಕ ಕಲ್ಯಾಣಾರ್ಥ?

     ನಾನು ಮತ್ತು ನನ್ನ ಪತ್ನಿ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿದ್ದಾಗ ಕಂಡ ದೃಷ್ಯದ ಒಂದು ತುಣುಕು ಸೆರೆ ಹಿಡಿದು ಇಲ್ಲಿ ಹಾಕಿರುವೆ. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹರಳು ಉಪ್ಪನ್ನು ಹರಡಲಾಗಿತ್ತು, ಅದರ ಮೇಲೆ ವ್ಯಕ್ತಿಯೊಬ್ಬರು ಹೊರಳುತ್ತಾ ಪ್ರದಕ್ಷಿಣೆ ಮಾಡುತ್ತಿದ್ದರು. ಹರಳು ಉಪ್ಪಾಗಿದ್ದರಿಂದ ಶರೀರಕ್ಕೆ ಚುಚ್ಚಿ ಅವರಿಗೆ ನೋವಾಗುತ್ತಿದ್ದುದು ಕಣ್ಣಿಗೆ ತಿಳಿಯುತ್ತಿತ್ತು. 'ಉರಿಯುವ ಗಾಯದ ಮೇಲೆ ಉಪ್ಪು ಸವರಿದಂತೆ' ಎಂಬ ಗಾದೆಯ ನೆನಪಾಯಿತು. ನೋವು ಅನುಭವಿಸಿ ಉರುಳುಸೇವೆ ಮಾಡುತ್ತಿದ್ದ ಅವರು ಉರುಳಲಾಗದೆ ಕೆಲವೊಮ್ಮೆ 5-10 ನಿಮಿಷಗಳು ಕಣ್ಣು ಮುಚ್ಚಿ ಅಲ್ಲೇ ಮಲಗಿರುತ್ತಿದ್ದರು. ಅವರನ್ನು ಅನುಸರಿಸಿ ಬರುತ್ತಿದ್ದ ಜೊತೆಯವರು ಭಜನೆ ಮಾಡುತ್ತಾ ಬರುತ್ತಿದ್ದರು. ಲೋಕ ಕಲ್ಯಾಣಾರ್ಥ ಅವರು ಹೀಗೆ ಉರುಳುಸೇವೆ ಮಾಡುತ್ತಿದ್ದರಂತೆ. ಇದರಿಂದ ಲೋಕಕಲ್ಯಾಣ ಹೇಗೆ ಆದೀತು ಎಂದು ನನಗಂತೂ ಅರ್ಥವಾಗಲಿಲ್ಲ. ಸುಮಾರು 50-60 ಮೂಟೆ ಉಪ್ಪು ಅಲ್ಲಿ ಸುರಿಯಲಾಗಿದ್ದು, ಅದು ನಂತರದಲ್ಲಿ ಉಪಯೋಗಕ್ಕೂ ಬರಲಾರದು. ಇದರಿಂದ ಲೋಕಕಲ್ಯಾಣ ಹೇಗೆ ಆಗುತ್ತದೆ ಎಂದು ನಿಮಗೆ ಯಾರಾದರೂ ಗೊತ್ತಿದ್ದರೆ ತಿಳಿಸುವಿರಾ?

14 ಕಾಮೆಂಟ್‌ಗಳು:

  1. ಮಾನ್ಯರೇ,
    ಯಾವ ಲೋಕ ಕಲ್ಯಾಣಾರ್ಥ ಅಂತ ನನಗೆ ಅರ್ಥವಾಗಲಿಲ್ಲ
    ಕೌಲವೆಂ

    ಪ್ರತ್ಯುತ್ತರಅಳಿಸಿ
  2. ಒಬ್ಬೊಬ್ಬರದ್ದು ಒಂದೊಂದು ಲೋಕದ ಕಲ್ಪನೆ! ಕುಡಿದವನ ಲೋಕ ಹೇಗಿರುತ್ತೆ, ಗೊತ್ತಾ! ನಿಜದ ಅರಿವಿನ ಕೊರತೆಯಾದಾಗ ಹೀಗೆಲ್ಲಾ ಅಗುತ್ತೆ. ಚಡಿ ಏಟು ತಿನ್ನುವುದು, ಮುಳ್ಳಿನ ಮೇಲೆ ಮಲಗುವುದು,ಇಂತಹ ಅತಿರೇಕಗಳೆಲ್ಲಾ ನಡೆಯುತ್ತವೆ. ದುರ್ದೈವವೆಂದರೆ ತುಂಬಾ ತುಂಬಾ ಓದಿದವರು ಕೂಡ ಇಂತದ್ದನ್ನೆಲ್ಲಾ ನಂಬ್ತಾರೆ! ನಿಜವನ್ನು ತಿಳಿಸಿದರೆ ಕೇಳುವವರಾರು? ಎಲ್ಲೋ ಸಾವಿರದಲ್ಲಿ ಒಬ್ಬರು ನಿಜವ ತಿಳಿಯಲು ಹಂಬಲಿಸುತ್ತಾರೆ. ಆದರೆ ಪ್ರಪಂಚವೆಲ್ಲಾ ಇಂತಹ ಅತಿರೇಕದಿಂದಲೇ ಸಾಗಿದೆ. ಅದಕ್ಕೆ ಜಾತಿ, ಧರ್ಮ, ಮತ, ದೇಶ ,ಎಂಬ ಭೇದವಿಲ್ಲ. ಎಲ್ಲಾಕಡೆಯಲ್ಲೂ ಇದೆ. ಜಾಗೃತಿ ಕಷ್ಟವೆಂದೇ ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  3. ಪ್ರತಿಕ್ರಿಯೆಗಾಗಿ ಶ್ರೀಯುತ ವೆಂಕಟಸುಬ್ಬಯ್ಯ ಮತ್ತು ಶ್ರೀಧರರಿಗೆ ವಂದನೆಗಳು.

    ಪ್ರತ್ಯುತ್ತರಅಳಿಸಿ
  4. Nagaprasad Mitta
    1). 50 rinda 60 moote uppu maridavanige swalpa labha baruthe.
    2) ondu urulige 5 calorie ashtu kobbu karaguthe.
    3) 50 moote load and unload madovrige kooli siguthe.
    4). Urulu seve nathara clean madokke ladies ge sambla siguthe.
    5). Urulu seve madorige charmada kaile yenara idre vasi aaguthe.
    6). Obbaru urulu seve madidre by fluke yenara olledadre, suddi haradidre, 100raru baktharu urulu seve sallistare, ashtu Jana urulu seve madire. 1 rinda 5 varugu iro itemnalliro janarigella labha. Aaguthe.

    7) obba ondu waste kelsa madidru. 4karu jannakke indirectagi upayoga aguthe.
    So nange gothiro haage ishtella loka kalyana saadya antha unkondini.

    Ram Neelapad Gowda
    ಈ ಆಚರವೆಲ್ಲಾ ಮೂಡ ನಂಬಿಕೆ ಮತ್ತು ಇದೊಂದು ವ್ಯಾಯಾಮ ಸಾಧನೆ ಎಂದು ನನ್ನ ಭಾವನೆ. ಒಂದು ತರಹ ಆಕ್ಯುಪ್ರೆಷರ್ ಟ್ರೀಟ್ಮೆಂಟ್. ಇದರಿಂದ ವ್ಯಕ್ತಿಯ ಅರೋಗ್ಯ ವ್ರುದ್ದಿಯಗಬಹುದು. ಲೋಕಕಲ್ಯಾಣದ ಬಗ್ಗೆ ಯೊಚಿಸುವುದಾದರೆ: ಉಪ್ಪು ತಯಾರಿಸುವ, ಸಾರಿಗೆ ಮಾಡುವ, ಮಾರಾಟ ಮಾಡುವ, ನಂತರ ಇಲ್ಲಿ ಚೆಲ್ಲಿರುವ ಉಪ್ಪನ್ನು ಮತ್ತು ಅದು ಕರಗಿ ನಿಂತಿರುವ ನೀರನ್ನು ಕ್ಲೀನ್ ಮಾಡುವ ವ್ಯಕ್ತಿಗಳಿಗೆಲ್ಲಾ ಆದಾಯ ಹೆಚ್ಚುತ್ತದೆ. ಇದೆಲ್ಲಾ ಒಂದು ರೀತಿ ಹಣದ ಸಂಚಲನೆಯನ್ನು ಸಮಾಜದಲ್ಲಿ ಹೆಚ್ಚಿಸುವುದರಿಂದ ಲೋಕಕಲ್ಯಾಣವಾಗುತ್ತದೆ.
    Sachchidananda Hegde
    ಉಪ್ಪು ಶರೀರದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ನಿವಾರಿಸುತ್ತದೆ. ಪ್ರಾಣ ಚೈತನ್ಯ ಚಿಕಿತ್ಸೆ, ರೇಕಿ ಮುಂತಾದ ಆಧ್ಯಾತ್ಮಿಕ ಚಿಕಿತ್ಸಾ ಪದ್ಧತಿಗಳಲ್ಲಿ ಋಣಾತ್ಮಕ (ನೆಗೆಟಿವ್) ಶಕ್ತಿಗಳ ನಿವಾರಣೆಗಾಗಿ ಉಪ್ಪುನೀರನ್ನು ಬಳಸುತ್ತಾರೆ. ಕುಟುಂಬದಲ್ಲಿ ಪ್ರೇತಭಾದೆ ಇದ್ದರೆ ವೈದಿಕ ರೀತ್ಯಾ ಅದನ್ನು ಬಂಧಿಸಿ ಸಮುದ್ರಕ್ಕೆ (ಉಪ್ಪುನೀರಿಗೆ) ಎಸೆಯುವ ಪದ್ಧತಿಯೂ ಇದೆ. ಬಹುಶಃ ಈಗ ನೀವು ಹೇಳಿದ ಪ್ರಸಂಗವೂ ಅದೇ ರೀತಿಯ ಚಿಕಿತ್ಸೆಯಾಗಿರಬಹುದು. ಒಬ್ಬೊಬ್ಬ ವ್ಯಕ್ತಿಯಲ್ಲಿರುವ ಋಣಾತ್ಮಕ ಶಕ್ತಿಗಳು ನಿವಾರಣೆಯಾದಂತೆಲ್ಲ ಅದು ಲೋಕಕಲ್ಯಾಣವೇ ಸರಿ!
    Naveen Gowda
    Yav kalyanu nu agola, uppa vyartha, deha dhandane ashte
    ಗೋರವಿ ಆಲ್ದೂರು
    ಇದರ ಒಳಾರ್ಥ ಇಷ್ಟೆ...ತಾಯಿ ಎಲ್ಲರ ನೋವನ್ನು ನಿನ್ನ ಸನ್ನಿಧಿಯಲ್ಲಿ ನಾನೇ ಅನುಭವಿಸುತ್ತೇನೆ ಉಳಿದವರ ನೆಮ್ಮದಿಗಾಗಿ...
    ಎಂಬ ನಂಬಿಕೆಯ ಆಚರಣೆ..!!

    ಪ್ರತ್ಯುತ್ತರಅಳಿಸಿ
  5. Nagaprasad Mitta

    My comments are similar to Nagaprasad Mitta. He beat me in posting my comments. Nagaprasad, you have given a very good explanation.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Sachchidananda Hegde
      ಉಪ್ಪು ಶರೀರದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ನಿವಾರಿಸುತ್ತದೆ. ಪ್ರಾಣ ಚೈತನ್ಯ ಚಿಕಿತ್ಸೆ, ರೇಕಿ ಮುಂತಾದ ಆಧ್ಯಾತ್ಮಿಕ ಚಿಕಿತ್ಸಾ ಪದ್ಧತಿಗಳಲ್ಲಿ ಋಣಾತ್ಮಕ (ನೆಗೆಟಿವ್) ಶಕ್ತಿಗಳ ನಿವಾರಣೆಗಾಗಿ ಉಪ್ಪುನೀರನ್ನು ಬಳಸುತ್ತಾರೆ. ಕುಟುಂಬದಲ್ಲಿ ಪ್ರೇತಭಾದೆ ಇದ್ದರೆ ವೈದಿಕ ರೀತ್ಯಾ ಅದನ್ನು ಬಂಧಿಸಿ ಸಮುದ್ರಕ್ಕೆ (ಉಪ್ಪುನೀರಿಗೆ) ಎಸೆಯುವ ಪದ್ಧತಿಯೂ ಇದೆ. ಬಹುಶಃ ಈಗ ನೀವು ಹೇಳಿದ ಪ್ರಸಂಗವೂ ಅದೇ ರೀತಿಯ ಚಿಕಿತ್ಸೆಯಾಗಿರಬಹುದು. ಒಬ್ಬೊಬ್ಬ ವ್ಯಕ್ತಿಯಲ್ಲಿರುವ ಋಣಾತ್ಮಕ ಶಕ್ತಿಗಳು ನಿವಾರಣೆಯಾದಂತೆಲ್ಲ ಅದು ಲೋಕಕಲ್ಯಾಣವೇ ಸರಿ!
      Naveen Gowda
      Yav kalyanu nu agola, uppa vyartha, deha dhandane ashte
      ಗೋರವಿ ಆಲ್ದೂರು
      ಇದರ ಒಳಾರ್ಥ ಇಷ್ಟೆ...ತಾಯಿ ಎಲ್ಲರ ನೋವನ್ನು ನಿನ್ನ ಸನ್ನಿಧಿಯಲ್ಲಿ ನಾನೇ ಅನುಭವಿಸುತ್ತೇನೆ ಉಳಿದವರ ನೆಮ್ಮದಿಗಾಗಿ...
      ಎಂಬ ನಂಬಿಕೆಯ ಆಚರಣೆ..!!

      ಅಳಿಸಿ
    2. indirect money circulate aga bahudu... adhare adnna dhaarmika sthalagalalli madodhakkintha bere privet property galalli madidare ondhu kallininda 2 hannu hodi bahudu..... yenanthira? pls take this comment as possitive.

      ಅಳಿಸಿ
    3. kgl gani
      uppannu bisilige hakidaga adhu bisi aguthe adharamele uruluvudarindha body pain kadime aguthe eradanedhu urulu seve mahathme thilko beku andhre nivu ondhu sari vurulu seve madi body ge entha exasig cguthe gotha try madi

      ಅಳಿಸಿ
  6. ಏನು ಹೇಳಿದರು ವಾದದ ಚಪಲಕ್ಕಾಗಿ ಹೇಳಬೇಕಷ್ಟೆ ಎಲ್ಲವೂ ಅವರವರ ನಂಭಿಕೆ!

    ಪ್ರತ್ಯುತ್ತರಅಳಿಸಿ
  7. ಚಪಲಕ್ಕಾಗಿ ಅಥವ ಮನರಂಜನೆಗಾಗಿ ವಾದ ಮಾಡಿದರೆ ಅದನ್ನು ಹರಟೆ ಎನ್ನಬಹುದು. ವೇದಸುಧೆ ಜಾಲ ಇರುವುದು ಹರಟೆಗಲ್ಲ.
    ನಂಬಿಕೆ ಎಂದು ಕಣ್ಮುಚ್ಚಿ ಮೂಢರಾಗುವುದು ಬೇಡ. ಪಕ್ಕದ ಮನೆಯವರು ಬಂದು ನಮ್ಮ ಮನೆಯ ಹುಳುಕನ್ನು ಎತ್ತಿ ತೋರಿಸುವ ಮುನ್ನ ನಾವು ಎಚ್ಚರಾಗೋಣ ಎನ್ನುವ ಕಾಲ ಮಿಂಚಿ ಹೋಗಿದೆ. ನಮ್ಮ ಹುಳುಕಿನ ಬಟ್ಟೆ ಪ್ರಪಂಚದ ಮುಂದೆ ಹರಿದು ಬೆತ್ತಲಾಗಿದ್ದೇವೆ. ಇನ್ನೂ ಮರೆಯಲ್ಲಿ ನಿಲ್ಲುವುದ ಬಿಟ್ಟು ಬಟ್ಟೆ ತೊಡೋಣ. ವೇದದ ಬೆಳಕಿನಲ್ಲಿ ಸತ್ಯ ಸಂಪ್ರದಾಯವನ್ನು ಅರಿಯೋಣ.

    ಪ್ರತ್ಯುತ್ತರಅಳಿಸಿ
  8. Chethan Koduvalli, Ravi Sharma, Arunachala Karanam and 7 others like this.
    Vasanth Kumar
    ಮೌಢ್ಯದ ಪರಮಾವಧಿ...

    Bolwar Mahamad Kunhi
    ಸುಮ್ನೆ ತಮಾಶೆಗೆ ವಸಂತಣ್ಣಾ..- ಇವರು ಹೋದದ್ದಾ? ಅವರು ಉರುಳಿದ್ದಾ?

    Kavi Nagaraj
    ಒಬ್ಬರಿಗೆ ತಮಾಷೆಯಾದದ್ದು ಇನ್ನೊಬ್ಬರಿಗೆ ಶ್ರದ್ಧೆಯ ವಿಷಯವಾಗಿರಬಹುದು ಎಂದು ಅರಿತರೆ ಸಂತೋಷ! ಇದು ಜಾತಿ/ಧರ್ಮಾತಿತವಾಗಿ ಎಲ್ಲರಿಗೂ ಅನ್ವಯವಾಗುತ್ತದೆ. ಇದನ್ನೂ ತಮಾಷೆಗೆ ಹೇಳಿರುವೆ.

    Bolwar Mahamad Kunhi
    ನಿಜ ನಾಗರಾಜ್, ನಿಮ್ಮ ಮಾತು ಖಂಡಿತವಾಗಿ ತಮಾಷೆಯಲ್ಲ.
    19 hours ago · Unlike · 1

    Vasanth Kumar
    ಪ್ರತಿಯೊಂದು ಧರ್ಮದಲ್ಲಿ ಅಲ್ಲ, ಮತದಲ್ಲಿ ಯೂ ಮೌಢ್ಯಗಳಿವೆ, ಕೆಲವರಲ್ಲಿ ನಗ್ನ ಸತ್ಯವಿದೆ, ಇತ್ತೀಚೆಗೆ ಒಂದು ಮತದ ಹಬ್ಬ ಆಚರಿಸುವ ದಿನ ವೃತ್ತ ಪತ್ರಿಕೆಯೊಂದರಲ್ಲಿ ಓದಿದೆ., ’ಸತ್ಯ. ತ್ಯಾಗ, ಅಹಿಂಸೆಗಳ ಸಂಕೇತ ಈ ಹಬ್ಬ’ ಎಂದು. ಆದರೆ ಆ ಹಬ್ಬದ ದಿನ ಮೋಜಿಗಾಗಿ ಸಹಸ್ರಾರು ಮೂಕ ಪ್ರಾಣಿಗಳ ಮಾರಣಹೋಮ ನಡೆಯುತ್ತದೆ..ಇದು ’ಅಹಿಂಸೆಯ’ ಸಂಕೇತವೆ???
    17 hours ago · Unlike · 1

    Bolwar Mahamad Kunhi
    ನಿಮಗಿನ್ನೂ ಅನುಮಾನವೇ?

    Govindappa Belagur Venkataramaiah
    ( ನೋವಾಗುತ್ತಿದ್ದುದು) ಪರೋಕ್ಷವಾಗಿ ಶಿಕ್ಷೆ?
    K Venkatesh Karanth
    ಇಂತಹ 'ಹರಕೆ' ಅತಿರೇಕ ಅನ್ನಿಸುತ್ತಿದೆ ನಿಜ!
    Jois Mvr
    ಮನ ೇವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Prasad Rao
      ಲೋಕಕಲ್ಯಾಣಕ್ಕಾಗಿ ಅವರು ಮಾಡಿದ ಉರುಳುಸೇವೆ, ಮತ್ತು ಅಷ್ಟೊಂದು ಉಪ್ಪು ವ್ಯರ್ಥ ಎಂದಾದರೆ,
      ದೇಶಭಕ್ತಿ ಹೆಸರಿನಲ್ಲಿ ನಾವು ನೀವೆಲ್ಲಾ ಮಾಡುವ ದಿನಾಚರಣೆಗಳೂ ಕೂಡ ವ್ಯರ್ಥ, ಅದರಿಂದಲೂ ಲೋಕಕಲ್ಯಾಣ ಆಗುದಿಲ್ಲ,
      ಆದರೆ ಈ ಭಕ್ತ ದೇಶಕ್ಕಾಗಿ ಮಾಡಿದ ಈ ಸಾಹಸ ನೋಡಿದ ಅಲ್ಲಿ ನೆರೆದ ಜನರಲ್ಲಿ ಖಂಡಿತ ದೇಶಪ್ರೇಮ ಬಡಿದೆಬ್ಬಿಸುವುದರಲ್ಲಿ ಸಂಶಯವಿಲ್ಲ.
      ಮತ್ತು ದೇವರು, ದೈವನಂಬಿಕೆ ಎಲ್ಲಾ ಬೇಕು. . .

      Som Yekkur
      ಉರುಳು ಸೇವೆಯಲ್ಲೂ ಪ್ರಯೋಗ ಶುರು ಆಯ್ತ ಮಾರಯ್ರೆ.....!!!!

      Shridhar Hegde
      ನಮ್ಮ ಆಚರಣೆಗಳ ಬಗ್ಗೆ ಪೂರ್ತಿ ವಿಶ್ಲೇಷಣೆ ನೀಡುವಷ್ಟು ತಿಳುವಳಿಕೆ ನನಗಿಲ್ಲ. ನನಗೆ ಗೊತ್ತಿರುವಷ್ಟು ತಿಳುಸುತ್ತಾ ಇದ್ದೆನೆ.
      ೧. ನಮ್ಮ ಪ್ರಾಚೀನರಲ್ಲಿ ಅತ್ಯಂತ ಮೇಧಾವಿಗಳು ಜ್ಞಾನಿಗಳು ಇದ್ದರು. ಅವರ ವಿಚಾರಗಳು ಬಹಳಷ್ಟು ಸಾಮಾನ್ಯ ಜನರ ಆಚರಣೆಯಲ್ಲಿ ಬಳಕೆಯಾಗಿ ಬಂದಿವೆ. ನಮ್ಮ ಪೂರ್ವಜರ ಎಲ್ಲ ವಿಷಯ ವಿಚಾರಗಳನ್ನು ವಿವರಿಸುವಷ್ಟು ವಿಜ್ಞಾನ ಬೆಳೆದಿಲ್ಲ. 5 ನೆ ತರಗತಿಯಲ್ಲಿ ಇರುವವರು ಹೇಗೆ 10 ನೆ ತರಗತಿಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವದು ಕಷ್ಟವೋ ಹಾಗೆಯೇ ಇದು.
      ೨. ಎಲ್ಲ ಆಚರಣೆಗಳನ್ನು ನಮಗೆ ಕಣ್ಣಿಗೆ ಕಾಣುವ ಪ್ರಭಾವಗಳಿಂದ ಅಳೆಯಲು ಸಾಧ್ಯವಿಲ್ಲ. ಆಚರಣೆಗಳ ಜೊತೆ -ಮನಸ್ಸಿನ ಭಾವನೆ ಕೂಡ ಮುಖ್ಯವಾಗುತ್ತದೆ. ಇದನ್ನು ನಮ್ಮ ಶಾಸ್ತ್ರಗಳು ಸಾರಿ ಹೇಳುತ್ತವೆ. ಮನಸ್ಸಿನಲ್ಲಿ ಉಂಟಾಗುವ ಭಾವನೆಗಳಿಂದ ಎಷ್ಟೋ ಒಳ್ಳೆಯ/ಕೆಟ್ಟ ಪ್ರಭಾವಗಳು ಉಂಟಾಗುತ್ತವೆ.
      Nimmalli Obba
      intha adkasbi idea kotta aa jyothisy or whoever it may be avarage heege maadsbeku..... but ee devarna nambi ade enu uddara aagideyo yaradru helrappa
      ಆದರೆ ನಾವು ಆಚರಿಸುತ್ತಿರುವದೆಲ್ಲ ಸರಿ ಎಂದು ಸಮರ್ಥನೆ ಮಾಡಿಕೊಳ್ಳುವದು ಸಾಧ್ಯವಿಲ್ಲ. ಆಚರಿಸುತ್ತಿರುವವರಿಗೆ ನಿಜವಾದ ಅರ್ಥ, ತಿಳುವಳಿಕೆ ಇಲ್ಲದೆ ಇರುವದರಿಂದ ಕೆಲವು ಆಚರಣೆಗಳು ಕಾಲಾಂತರದಲ್ಲಿ ಆಚರಣೆಯ ಅರ್ಥ ಕಳೆದುಕೊಂಡಿರಬಹುದು.
      Dev Sanu
      LOKO VIBHINNA RUCHIHI
      Prathibha Rai
      sariyagi helidiri kaviyavare.

      ಅಳಿಸಿ
    2. Jayaprakash Sumana
      B M k Avara bagge nanage thumbaa gouravavide, hage k v n bagge Koooda, Idannoo
      Moodhanambike ennlebeku, matthu thappisalu prayathnisabeku !

      ಅಳಿಸಿ
  9. ನಮ್ಮ ಕಲ್ಯಾಣಕ್ಕಿಂತ ಪುರೋಹಿತರ ಕಲ್ಯಾಣವೇ ಇದರಲ್ಲಿ ಪ್ರಮುಖವಾಗಿದೆ.

    ಪ್ರತ್ಯುತ್ತರಅಳಿಸಿ