ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬರುವವರು ಇರಬಹುದು. ಆದರೆ ಪರಿಚಯವೇ ಇಲ್ಲದ, ಇಂತಹ ಸಮಸ್ಯೆ ಇರುವ ಯಾರಾದರೂ ಕಡುಬಡವರಿಗೆ ತಾವು ಬದುಕಿರುವಾಗಲೇ ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬಂದವರನ್ನು ಕಂಡಿದ್ದೀರಾ? ಅಂತಹ ಧೀಮಂತ ಮಹಿಳೆಯೊಬ್ಬರು ಇದ್ದಾರೆ, ಅವರೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಶ್ರೀಮತಿ ಶಕುಂತಲಾ ಮಂಜುನಾಥರವರು.
ಪತಿ ಮಂಜುನಾಥ ಮತ್ತು ಮಗ ಪ್ರವೀಣನೊಂದಿಗೆ ಶ್ರೀಮತಿ ಶಕುಂತಲಾ.
ಸಾಣೇನಹಳ್ಳಿ ಶ್ರೀಗಳು ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ನೇತ್ರದಾನ ಶಿಬಿರವೊಂದರಲ್ಲಿ ನೇತ್ರದಾನ ಮಾಡಲು ಮುಂದೆ ಬಂದ ಹಲವರು ಆ ಬಗ್ಗೆ ತಮ್ಮ ಒಪ್ಪಿಗೆ ಪತ್ರ ಬರೆದುಕೊಡುತ್ತಿದ್ದರು. ಶ್ರೀಮತಿ ಶಕುಂತಲಾ ಮಂಜುನಾಥರವರು ಬರೆದುಕೊಟ್ಟ ಪತ್ರದಲ್ಲಿದ್ದ ಒಕ್ಕಣೆ:
"ನಾನು ನನ್ನ ಕಣ್ಣುಗಳನ್ನು ದಾನ ಮಾಡುತ್ತೇನೆ. ಇದು ನಾನು ಮೃತಳಾದ ಮೇಲೆ ಆಗುವ ಕಾಯಕ. ಆದರೆ ನಾನು ಜೀವಿತಾವಧಿಯಲ್ಲೇ ಕಡುಬಡವರಿಗೆ ನನ್ನ ಒಂದು ಮೂತ್ರಪಿಂಡ ಕಿಡ್ನಿ ಕೊಡಲು ಬಯಸಿದ್ದೇನೆ. ದಯವಿಟ್ಟು ಇದಕ್ಕೆ ಅವಕಾಶ ಕಲ್ಪಿಸಿಕೊಡಿ."
ಈ ವಿಷಯವನ್ನು ಸಂಬಂಧಿಸಿದ ಸಂಸ್ಥೆ/ಆಸ್ಪತ್ರೆಗೆ ತಿಳಿಸುವ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ. ಅಲ್ಲದೆ ಬಡವರಿಗೆ ಒದಗುವ ಖರ್ಚು ಹೊಂದಿಸಲು ಅವರಿಗೆ ಆಗದೇ ಇರಬಹುದಾದ್ದರಿಂದ, ಸ್ವಾಮಿಗಳಿಗೆ ಹೇಳಿದರೆ ಅವರು ಸಹಕಾರ ನೀಡಿ ಒಳ್ಳೆಯದಾಗಬಹುದೆಂಬ ಕಾರಣದಿಂದ ಅವರಿಗೆ ಪತ್ರ ಬರೆದುಕೊಟ್ಟಿದ್ದರು. ೫೦ ವರ್ಷದ ಶ್ರೀಮತಿ ಶಕುಂತಲಾ ಮಂಜುನಾಥರವರ ಪತಿ ಮಂಜುನಾಥರವರು ಒಬ್ಬ ಸಾಮಾನ್ಯ ರೈತ, ತೃಪ್ತ ಜೀವನ ನಡೆಸುತ್ತಿರುವವರಾಗಿದ್ದು ಪತ್ನಿಯ ನಿರ್ಧಾರದ ಬಗ್ಗೆ ಅವರ ಸಂಪೂರ್ಣ ಸಮ್ಮತಿ ಇದೆ. ಅವರ ಇಬ್ಬರು ಹೆಣ್ಣುಮಕ್ಕಳ ಮದುವೆ ಆಗಿದೆ. ಒಬ್ಬ ಗಂಡು ಮಗ ಪ್ರವೀಣ ತಾಯಿ ಮಾಡುವುದಾಗಿ ಹೇಳಿರುವ ಕೆಲಸ ಒಳ್ಳೆಯದಾಗಿದ್ದು ತಾನು ಏನೂ ಹೇಳುವುದಿಲ್ಲವೆನ್ನುತ್ತಾನೆ.
ನೊಂದವರಿಗಾಗಿ ಮಿಡಿಯುವ ಹೃದಯವೀಣೆಯ ನಾದ ಎಲ್ಲರಿಗೂ ಕೇಳಲಿ, ಇತರರೂ ಪ್ರೇರಿತರಾಗಲಿ ಎಂಬುದೇ ಈ ಕಿರುಬರಹದ ಉದ್ದೇಶ.
********************
-ಕ.ವೆಂ.ನಾಗರಾಜ್.
(ಆಧಾರ: ವಿಜಯ ಕರ್ನಾಟಕ - ದಿ. ೧೦-೦೭-೨೦೧೧).
ಫೇಸ್ ಬುಕ್ಕಿನಲ್ಲಿನ ಪ್ರತಿಕ್ರಿಯೆ:
ಪ್ರತ್ಯುತ್ತರಅಳಿಸಿಹೊಳೆನರಸಿಪುರ ಮ೦ಜುನಾಥ Thimmayya, Nirmala Krishnamurthy, Lakshmipathy Jois and 2 others like this.
Ramjan Darga
BASAVA IS LIVING IN THE HEART OF SHAKUNTHALA MANJUNATH. NOT IN THE HEARTS OF SAFFRON PONTIFFS.
9 hours ago · Like
Kavi Nagaraj
ರಮಜಾನದರ್ಗಾರ ಪ್ರತಿಕ್ರಿಯೆಯಲ್ಲಿ ಒಳ್ಳೆಯ ಸಂಗತಿಯನ್ನು ಮೆಚ್ಚುವುದಕ್ಕಿಂತ ಹೆಚ್ಚಾಗಿ ಅನಗತ್ಯವಾಗಿ ಮೂರನೆಯವರನ್ನು ಟೀಕಿಸುವುದು ಪ್ರಧಾನವಾಗಿ ಕಾಣುತ್ತಿದೆ. ಒಳ್ಳೆಯ ಸಂಗತಿ ಯಾರಿಂದಲೇ ಬರಲಿ, ಅದು ಹಸಿರು ಫಕೀರರಿಂದಲೇ ಬರಲಿ, ಸ್ವಾಗತಿಸೋಣ.
about a minute ago · Edited · Like · 1
Parthasarathy Narasingarao ಇಲ್ಲ ಸಾರ್ ಈಗೆಲ್ಲ ಮೆಚ್ಚುವುದು ಕಡಿಮೆ ! ಚುಚ್ಚುವುದು ಜಾಸ್ತಿ !
ಅಳಿಸಿಅದೇ ಫೇಸ್ ಬುಕ್ಕಿನ ಮಹಿಮೆ !
21 hours ago · Like · 2
Ramjan Darga · 342 mutual friends
Monks and Sannyasins and Brahamns of a certain type have thrown the country into ruin. Intent all the while on theft and wickedness, these pose as preachers of religion! They will take gifts from the people and at the same time cry, 'Don't touch me!' (Vol.VI. 318)
- Swami Vivekananda
Kavi Nagaraj, you are follower of SAFFRON PONTIFF VIVEKANANDA. I hope you agree with him. I or He did not point out any person. This is just the general condition in all Religions.
20 hours ago · Like
Vasanth Kumar ಭಾರತವನ್ನು ಲೂಟಿ ಮಾಡಿ ನಾಶಮಾಡಲು ಹವಣಿಸಿದ್ದು ’ಪರಕೀಯ ಆಕ್ರಮಣಕಾರರು’ ಎಂದು ಚರಿತ್ರೆಯಲ್ಲಿ ಓದಿದ ನೆನಪು....
4 hours ago · Edited · Unlike · 1
Kavi Nagaraj ರಮಜಾನ ದರ್ಗಾರೇ, ನಾನು ಶಕುಂತಲಾ ಮಂಜುನಾಥರವರ ಒಳ್ಳೆಯ ಗುಣದ ಬಗ್ಗೆ ಪ್ರಸ್ತಾಪಿಸಿದ್ದರೆ, ನೀವು ಅನವಶ್ಯಕವಾಗಿ ಕೇಸರಿ ಸಂತರ ವಿಷಯ ಎಳೆದಿರುವುದು ನಿಮ್ಮ ಅಸಹನೆಯನ್ನು ತೋರಿಸುತ್ತದೆ. ಇದು ಅನಗತ್ಯವಾಧ ಚರ್ಚೆಗೂ ಕಾರಣವಾಗುತ್ತದೆ. ನೀವು ಹೇಳಿದ ಕಾರಣದಿಂದ ನಾನೂ ಬರೆಯಬೇಕಾಗಿದೆ.ಧಾರ್ಮಿಕ ಅಸಹನೆಯ ಪ್ರಚಾರ ಮಾಡುವ, ಜಿಹಾದ್ ಬೆಂಬಲಿಸುವ ಹಸಿರು ಫಕೀರರು ಇಡೀ ವಿಶ್ವದಲ್ಲಿ ಆಶಾಂತಿಗೆ ಕಾರಣರಾಗಿರುವುದು ಇತಿಹಾಸದ ಕಟು ಸತ್ಯ. ವಿವೇಕಾನಂದರು ಬೋಧಿಸಿರುವುದು ಧಾರ್ಮಿಕ ಸಹನೆಯನ್ನೇ! ಪ್ರತಿಯೊಬ್ಬರೂ ಅವರಿಗೆ ಇಷ್ಟವಾದ ದಾರಿಯಲ್ಲಿ ನಡೆಯಲಿ, ಇತರರ ದಾರಿ ಕುರಿತು ಅಸಹನೆ ಬೇಡವೆಂದೇ!
Sridhar Bandri ಜನ ತಿರುಳನ್ನು ಬಿಟ್ಟು ಅದೇಕೆ ಸಿಪ್ಪೆಯನ್ನೋ ಚೀಪುತ್ತಾ ಕಾಲ ವ್ಯರ್ಥ ಮಾಡುತ್ತಾರೋ ಗೊತ್ತಾಗುತ್ತಿಲ್ಲ. ಸಾಧ್ಯವಾದರೆ ಒಳ್ಳೆಯ ಕೆಲಸ ಮಾಡಬೇಕು, ಮಾಡಲಾಗದಿದ್ದರೆ ಮಾಡುವವರನ್ನಾದರೂ ಪ್ರೋತ್ಸಾಹಿಸಬೇಕು. ಅದೂ ಆಗದಿದ್ದರೆ ಸುಮ್ಮನಾದರೂ ಇರಬೇಕು. ಏಕೆ ಹೀಗೆ ಕಾಲೆಳುಯುತ್ತಾರೋ ಗೊತ್ತಿಲ್ಲ :((
ಅಳಿಸಿಪರರಿಗಾಗಿ ತನ್ನದೆಲ್ಲವನ್ನೂ ದಾನ ಮಾಡುವವನು ದೇವತೆಯೇ ಸರಿ, ತನ್ನ ಅವಶ್ಯಕತೆಗಳನ್ನು ನೋಡಿಕೊಂಡು ಇತರರಿಗೆ ಸಹಾಯ ಮಾಡುವವನು ಸಾಮಾನ್ಯ ಮಾನವ. ತನಗೆ ಬೇಕಾದ್ದನ್ನು ಇತರರಿಂದ ಕಸಿದುಕೊಳ್ಳುವವ ಮಾನವ ರೂಪೀ ರಾಕ್ಷಸರು. ಆದರೆ ಅನಾವಶ್ಯಕವಾಗಿ ಇತರರಿಗೆ ತೊಂದರೆ ಕೊಡುವವರಿಗೆ ಏನೆನ್ನಬೇಕೋ ತಿಳಿಯದು ಎನ್ನುತ್ತಾನೆ ಭರ್ತೃಹರಿ ತನ್ನ ಶತಕವೊಂದರಲ್ಲಿ.
4 hours ago · Unlike · 2