ಚರಕ ಸಂಹಿತೆಯಲ್ಲಿ ಆಯುರ್ವೇದ ಶಾಶ್ವತ ಹಾಗೂ ಅನಾದಿ ಎಂದು ವರ್ಣಿಸಲಾಗಿದೆ. ಎಲ್ಲಾ ಸಂಹಿತೆಗಳಲ್ಲೂ ಆಯುರ್ವೇದದ ಮೂಲ ಕರ್ತೃ ಬ್ರಹ್ಮ ಎಂದು ಹೇಳಲಾಗಿದೆ. ಸುಶ್ರುತ ಸಂಹಿತೆಯಲ್ಲಿ, ಬ್ರಹ್ಮನು ಸೃಷ್ಠಿ ರಚನೆಗೂ ಮುನ್ನ ಪ್ರಜೆಗಳ ಹಿತಕ್ಕಾಗಿ ಶತಸಹಸ್ರ (೧೦೦೦೦೦) ಶ್ಲೋಕ, ಸಹಸ್ರ(೧೦೦೦) ಅಧ್ಯಾಯಗಳನ್ನುಳ್ಳ ’ಆಯುರ್ವೇದ’ ಎಂಬ ಅಥರ್ವ ವೇದದ ಉಪಾಂಗವನ್ನು ರಚಿಸಿದನು ಎಂದು ಉಲ್ಲೇಖಿಸಲಾಗಿದೆ.
ಆಯುರ್ವೇದದ ಅವತರಣದಲ್ಲಿ ಮುಖ್ಯವಾಗಿ ಎರಡು ಸಂಪ್ರದಾಯಗಳಿವೆ. ೧. ಆತ್ರೇಯ ಸಂಪ್ರದಾಯ. ೨. ಧನ್ವಂತರಿ ಸಂಪ್ರದಾಯ.
ಆತ್ರೇಯ ಸಂಪ್ರದಾಯದ ಪ್ರಕಾರ, ಬ್ರಹ್ಮನು ಆಯುರ್ವೇದವನ್ನು ದಕ್ಷ ಪ್ರಜಾಪತಿಗೆ ತಿಳಿಸಿದನು. ಅವನಿಂದ ಅದು ಕ್ರಮವಾಗಿ ಅಶ್ವಿನಿ ಕುಮಾರರು, ಇಂದ್ರ, ಭಾರದ್ವಾಜ ಮುನಿ, ಪುನರ್ವಸು ಆತ್ರೇಯ, ಅಗ್ನಿವೇಶಾದಿ ಮುನಿಗಳಿಗೆ ತಿಳಿಸಲ್ಪಟ್ಟಿತು. ಈ ಸಂಪ್ರದಾಯ ಕಾಯ ಚಿಕಿತ್ಸಾ ಪದ್ಧತಿಗೆ ಒತ್ತು ನೀಡುತ್ತದೆ.
|
ಪುನರ್ವಸು ಆತ್ರೇಯ ಹಾಗು ಅಗ್ನಿವೇಶಾದಿ ೬ ಶಿಶ್ಯಂದಿರು |
ಧನ್ವಂತರಿ ಸಂಪ್ರದಾಯದ ಪ್ರಕಾರ ಬ್ರಹ್ಮನಿಂದ ಇಂದ್ರನವರೆಗಿನ ಅವತರಣ ಕ್ರಮ ಹಾಗೇ ಇದ್ದು, ನಂತರ ಅದು ಕಾಶಿರಾಜ ದಿವೋದಾಸ ಧನ್ವಂತರಿಗೆ ತಿಳಿಸಲ್ಪಟ್ಟಿತು. ಅವನಿಂದ ಅದನ್ನು (ಆಯುರ್ವೇದದ ಜ್ಞಾನವನ್ನು) ಸುಶ್ರುತಾದಿ ಮುನಿಗಳು ಗ್ರಹಿಸಿದರು. ಈ ಸಂಪ್ರದಾಯ ಶಲ್ಯ ಚಿಕಿತ್ಸಾ(surgery) ಪದ್ಧತಿಗೆ ಒತ್ತು ನೀಡುತ್ತದೆ.
|
ಸುಶ್ರುತ |
ಕಾಯ ಚಿಕಿತ್ಸಾ ಪದ್ಧತಿ ಮತ್ತು ಶಲ್ಯ ಚಿಕಿತ್ಸಾಪದ್ಧತಿ ಇವೆಡರ ಬಗೆಗೆ ಸ್ವಲ್ಪ ತಿಳಿಸಿಕೊಡುವಿರಾ?
ಪ್ರತ್ಯುತ್ತರಅಳಿಸಿ