ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜುಲೈ 25, 2013

ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

     ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ ವಿಧಿವತ್ ಪ್ರತಿಷ್ಟಾಪನೆ ಕಾರ್ಯ ಹುಬ್ಬಳ್ಳಿಯ ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಸಾನ್ನಿಧ್ಯದಲ್ಲಿ ೦೯-೦೬-೨೦೧೩ರಂದು ನೆರವೇರಿತ್ತು. ಆ ಗೋಶಾಲೆಗೂ ಒಂದು ಹಿನ್ನೆಲೆಯಿತ್ತು. ೨೦ ವರ್ಷದ ಬೆಳೆದ ಮಗ ಸುಭಾಷ್ ಅಕಾಲಿಕವಾಗಿ ತೀರಿಹೋದ ದುಃಖವನ್ನು ಅರಗಿಸಿಕೊಳ್ಳಲಾಗದ ಆ ದಂಪತಿಗಳು ಗೋಶಾಲೆಯನ್ನು ನಡೆಸುವ ಮೂಲಕ ಮರೆಯಲು ಪ್ರಯತ್ನಿಸಿದ್ದಾರೆ. ಆಹ್ವಾನವಿದ್ದದ್ದರಿಂದ ಹಾಸನದ ವೇದಭಾರತಿಯ ನಾವು ಹದಿನೈದು ವೇದಾಭ್ಯಾಸಿಗಳು ಆ ಸಮಾರಂಭಕ್ಕೆ ಹೋಗಿದ್ದೆವು. ನಮ್ಮ ತಂಡದಲ್ಲಿ ಮಹಿಳೆಯರೂ ಇದ್ದು ಸ್ವಾಮಿಗಳ ಸಮ್ಮುಖದಲ್ಲಿ ವೇದಘೋಷವನ್ನೂ ಮಾಡಿದೆವು. ಮಹಿಳೆಯರೂ ವೇದಮಂತ್ರಗಳನ್ನು ಹೇಳಿದ್ದನ್ನು ಕೇಳಿದ ಸ್ವಾಮಿಗಳು ಆನಂದಿತರಾಗಿ ವೇದಭಾರತಿಯ ಕುರಿತು ವಿಚಾರಿಸಿದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸುಗಳ ತಾರತಮ್ಯವಿಲ್ಲದೆ ಕಳೆದ ಒಂದು ವರ್ಷದಿಂದ ವೇದಾಭ್ಯಾಸ ಮಾಡುತ್ತಿರುವ ಬಗ್ಗೆ, ಇದಕ್ಕೆ ಪೂರಕವಾದ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿ, ಈ ಕಾರ್ಯಕ್ಕೆ ಅವರ ಆಶೀರ್ವಾದವನ್ನೂ ಕೋರಿದೆವು. ಆಗ ಅವರು ಉದ್ಗರಿಸಿದ್ದೇನೆಂದರೆ, "ಇದು ನಿಜವಾಗಿ ರಾಷ್ಟ್ರ ಕಟ್ಟುವ ಕೆಲಸ. ಆಗಬೇಕಾಗಿರುವುದೂ ಇದೇ. ಕೇವಲ ನನ್ನ ಆಶೀರ್ವಾದ ನಿಮಗೆ ಸಾಕೆ? ಐ ವಿಲ್ ಬಿ ವಿತ್ ಯು! " ಈ ಭೇಟಿಯ ಫಲಶ್ರುತಿಯಾಗಿ ಇದೀಗ ಸ್ವಾಮಿಗಳು ವೇದಭಾರತಿ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಕೇಂದ್ರದ ಆಶ್ರಯದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ತಿಂಗಳು ೨೫ ರಿಂದ ೩೦ರವರೆಗೆ ಗೀತಾಜ್ಞಾನಯಜ್ಞ ನಡೆಸಿಕೊಡುತ್ತಿದ್ದಾರೆ. ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಕಿರುಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.
     ಪೂಜ್ಯರ ಪೂರ್ವಾಶ್ರಮದ ಹೆಸರು ದತ್ತಾತ್ರೇಯ. ಸಾತ್ವಿಕ ದಂಪತಿಗಳಾದ ಕೃಷ್ಣಭಟ್ಟ-ಕಮಲಾಬಾಯಿಯವವರ ಮೂರನೆಯ ಮಗನಾಗಿ ೧೧-೧-೧೯೪೮ರಲ್ಲಿ ಜನಿಸಿದ ಇವರು ಚಿಕ್ಕಂದಿನಲ್ಲಿಯೇ ತಂದೆಯವರನ್ನು ಕಳೆದುಕೊಂಡು, ತಾಯಿ ಮತ್ತು ಸೋದರಮಾವನ ಆಶ್ರಯದಲ್ಲಿ ಸುಯೋಗ್ಯ ಶಿಕ್ಷಣ, ಸಂಸ್ಕಾರಗಳನ್ನು ಪಡೆದರು. ಬಾಲ್ಯದಿಂದಲೇ ಭಜನೆ, ಕೀರ್ತನೆ, ಸತ್ಸಂಗಗಳಲ್ಲಿ ಕಳೆಯುವ ಅವಕಾಶ ಮತ್ತು ಸಂಸ್ಕಾರ ಅವರಿಗೆ ಲಭ್ಯವಾಗಿತ್ತು. ತಬಲ ಮತ್ತು ಹಾರ್ಮೋನಿಯಮ್ ನುಡಿಸುವುದನ್ನು ಕಲಿತ ಅವರಿಗೆ ಸಂಗೀತದಲ್ಲೂ ಆಸಕ್ತಿಯಿತ್ತು. ಅವರ ತಾಯಿ ಹಸ್ತ ಸಾಮುದ್ರಿಕ, ಶರೀರ ಹಾಗೂ ಮುಖಲಕ್ಷಣ ಶಾಸ್ತ್ರಗಳನ್ನು ತಿಳಿದವರಾಗಿದ್ದು, ಮಗನಿಗೆ ಬಯ್ಯುವಾಗ ಆಗಾಗ್ಗೆ 'ನೀನು ಸನ್ಯಾಸಿ ಆಗು' ಅನ್ನುತ್ತಿದ್ದರಂತೆ. ಹುಬ್ಬಳ್ಳಿಯ ಭೂಮರೆಡ್ಡಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜನಿಯರಿಂಗ್ ಶಿಕ್ಷಣ ಪಡೆದು, ಕೆಲಕಾಲ ಅಣ್ಣಿಗೇರಿ, ನವಲಗುಂದಗಳಲ್ಲಿ ಖಾಸಗಿ ಸೇವೆಯನ್ನೂ ಸಲ್ಲಿಸಿದ್ದರು. ಸ್ವಾಮಿ ಚಿನ್ಮಯಾನಂದರ ಪ್ರಭಾವಕ್ಕೆ ಒಳಗಾದ ಅವರು ೧೯೭೯-೮೦ರಲ್ಲಿ ಸ್ವಾಮಿ ಚಿನ್ಮಯಾನಂದರ ಸಾಂದಿಪಿನಿ ಗುರುಕುಲದಲ್ಲಿ ಎರಡೂವರೆ ವರ್ಷಗಳ ಕಾಲ ವೇದಾಂತ ಸಾಧನಾ ತರಬೇತಿ ಪಡೆದರು. ನಂತರ ಸ್ವಾಮಿ ದಯಾನಂದ ಸರಸ್ವತಿಗಳವರ ಆಚಾರ್ಯತ್ವದಲ್ಲಿ ಹೃಷಿಕೇಶ, ಮುಂಬಯಿ, ಉತ್ತರಕಾಶಿಗಳಲ್ಲಿ ಶಾಸ್ತ್ರ ಅಧ್ಯಯನ ತರಬೇತಿ ಪಡೆದು, ನೈಷ್ಟಿಕ ಬ್ರಹ್ಮಚಾರಿ ದೀಕ್ಷೆ ಹೊಂದಿ ಮುಕ್ತಚೈತನ್ಯ ಎಂಬ ಹೆಸರು ಪಡೆದರು. ಮೂರು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಮಳಗಿಯಲ್ಲಿ ಆಶ್ರಮ ಹೊಂದಿ ಭಜನೆ, ಸತ್ಸಂಗ, ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಶುದ್ಧ ಅದ್ವೈತ ವೇದಾಂತವನ್ನು ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಹೃಷಿಕೇಶದ ಗಂಗಾತಟದಲ್ಲಿ ಸ್ವಾಮಿ ದಯಾನಂದ ಸರಸ್ವತಿಗಳಿಂದ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ಚಿದ್ರೂಪಾನಂದ ಸರಸ್ವತಿ ಎಂಬ ನಾಮಧೇಯವನ್ನು ಸದ್ಗುರುವಿನಿಂದ ಪಡೆದರು.
     ಗುರುಗಳ ಮಾರ್ಗದರ್ಶನದಲ್ಲಿ ಸತತ ಏಳು ವರ್ಷಗಳ ಕಾಲ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ, ವೇದ, ಉಪದೇಶಸಾರ, ಇತ್ಯಾದಿಗಳನ್ನು ಆಳವಾಗಿ ಅಭ್ಯಸಿಸಿದ ಪೂಜ್ಯರು, ಗುರುಗಳ ಸೂಚನೆಯಂತೆ ತಾವು ಹೊಂದಿದ ಜ್ಞಾನಪ್ರಸಾರಕಾರ್ಯವನ್ನು ಮಾಡುತ್ತಾ ಎಲ್ಲೆಡೆ ಪ್ರವಾಸ ಮಾಡತೊಡಗಿದರು. ಹಲವು ಸಲ ವಿದೇಶಗಳಲ್ಲೂ ಸಂಚರಿಸಿ ಆಧ್ಯಾತ್ಮಿಕ ಪ್ರಚಾರ ಮಾಡಿದರು. ಇದೀಗ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪೂರ್ವಾಶ್ರಮದಲ್ಲಿ ಸಿವಿಲ್ ಇಂಜನಿಯರ್ ಆಗಿ ಮನೆಗಳನ್ನು ಕಟ್ಟುತ್ತಿದ್ದ, ಮುರಿದ ಮನೆಗಳನ್ನು ಸರಿಪಡಿಸುತ್ತಿದ್ದ ಪೂಜ್ಯರು ಈಗಲೂ ಆಧ್ಯಾತ್ಮಿಕ ಇಂಜನಿಯರ್ ಆಗಿ ಮುರಿದ ಮನಗಳನ್ನು ಕಟ್ಟುವ ಕಾಯಕ ಮುಂದುವರೆಸಿದ್ದಾರೆ. ಜನರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ, ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಈ ಕಾರ್ಯಕ್ಕೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿಸಿ ಹೇಳಬಲ್ಲ ಅವರ ಪಾಂಡಿತ್ಯ, ಜನರೊಡನೆ ಬೆರೆಯುವ ರೀತಿಗಳು ಸಹಕರಿಸಿವೆ.
     ಹುಬ್ಬಳ್ಳಿಯಲ್ಲಿ ಆರ್ಷವಿದ್ಯಾಪೀಠದ ಹೆಸರಿನಲ್ಲಿ ಆಶ್ರಮ ಹೊಂದಿರುವ ಇವರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಗುರುಕುಲವೊಂದನ್ನೂ ಸ್ಥಾಪಿಸಿದ್ದಾರೆ. ಆಶ್ರಮ ಮತ್ತು ಗುರುಕುಲದಲ್ಲಿ ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ಆಧ್ಯಾತ್ಮ ಶಿಬಿರಗಳು, ಸೇವಾಕಾರ್ಯದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗಳನ್ನು ಆಗಾಗ್ಗೆ ನಡೆಸುತ್ತಾ ಬಂದಿರುವುದಲ್ಲದೆ, ಅನೇಕ ಮಾರ್ಗದರ್ಶಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಯವರು ೨೦೦೦ದಲ್ಲಿ ಪ್ರಾರಂಭಿಸಿದ ಅಖಿಲ ಭಾರತ ಸೇವಾ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗಳ ಸಮೀಪದಲ್ಲಿಯೇ ಛಾತ್ರಾಲಯ(ಹಾಸ್ಟೆಲ್)ಗಳನ್ನು ಸ್ಥಾಪಿಸಿ ಅವರುಗಳಿಗೆ ಉಚಿತವಾಗಿ ಊಟ, ವಸತಿಗಳನ್ನು ಒದಗಿಸುವುದಲ್ಲದೆ ಶಿಕ್ಷಣಕ್ಕೆ ಪೂರಕವಾದ ಆವಶ್ಯಕತೆಗಳನ್ನು ಒದಗಿಸುವುದು, ಆಟೋಟಗಳು, ಕುಶಲಕಲೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದವುಗಳಲ್ಲಿ ತರಬೇತಿ ನೀಡುವುದರ ಜೊತೆಗೆ ಅವರನ್ನು ಸದ್ವಿಚಾರಗಳನ್ನು ಹೊಂದುವ ಸುಯೋಗ್ಯ ಮಾನವರನ್ನಾಗಿ ರೂಪಿಸಿ ಭವಿಷ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೇಶದ ೧೧ ರಾಜ್ಯಗಳಲ್ಲಿ ೪೦ ಛಾತ್ರಾಲಯಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸೇವಾ ಅಭಿಯಾನದ ಪ್ರಮುಖರಾಗಿರುವ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಮುಂದಾಳತ್ವದಲ್ಲಿ ೧೭ ಛಾತ್ರಾಲಯಗಳಲ್ಲಿ ೫೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ೧೨೦ ಸಂಧ್ಯಾ ಗುರುಕುಲಗಳು ೪೦೦೦ಕ್ಕೂ ಹೆಚ್ಚು ಶಾಲೆಗೆ ಹೋಗುವ ಮಕ್ಕಳಿಗೆ ಉಪಯೋಗಿಯಾಗಿವೆ. ಹೊನ್ನಾವರದಲ್ಲಿ ಒಂದು ಪ್ರಾಥಮಿಕ ಶಾಲೆ, ಕಲಭಾವಿಯಲ್ಲಿ ಪ್ರೌಢಶಾಲೆ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವೇದ ಪಾಠಶಾಲೆಗಳು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ೧೭೦ ಸ್ವಸಹಾಯ ಸಂಘಗಳು ಕಾರ್ಯನಿರತವಾಗಿವೆ. ೧೯೯೮ರಲ್ಲಿ ಪೂಜ್ಯರಿಂದ ಪ್ರಾರಂಭವಾದ ಅಕ್ಷಯ ಟ್ರಸ್ಟ್ ಸಹಾಯ ಅಗತ್ಯವಿರುವ ಎಲ್ಲರಿಗೆ ಜಾತಿ,ಮತ, ರಾಷ್ಟ್ರೀಯತೆಗಳ ಭೇದವಿಲ್ಲದೆ ಶಿಕ್ಷಣ ನೀಡುವ ಗುರಿ ಹೊಂದಿದ್ದು ೬ ಶಾಲೆಗಳು, ಪಿಯು ವಿಜ್ಞಾನ ಕಾಲೇಜು ಮತ್ತು ವೇದಪಾಠಶಾಲೆ ನಡೆಸುತ್ತಿದ್ದು ಸುಮರು ೫೦೦೦ ಮಕ್ಕಳು ಪ್ರಯೋಜನ ಹೊಂದಿದ್ದಾರೆ. 'ಸ್ವಾಸ್ಥ್ಯ' ಎಂಬ ಕನಸಿನ ಯೋಜನೆ ರೂಪಿಸಿರುವ ಇವರು, ಅಕ್ಷಯ ಟ್ರಸ್ಟ್ ವತಿಯಿಂದ ಇದರ ಅಡಿಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಭವನದಲ್ಲಿ ನಿಯಮಿತವಾಗಿ ಧಾರ್ಮಿಕ ಪ್ರವಚನಗಳು, ಧ್ಯಾನ, ಪ್ರಾರ್ಥನೆ ಮತ್ತು ಯೋಗ ಮಾಡಲು ಅವಕಾಶ, ಸಾತ್ವಿಕ ಆಹಾರ, ವ್ಯಾಯಾಮಶಾಲೆ, ಈಜುವಕೊಳ, ಇತ್ಯಾದಿಗಳನ್ನು ಒದಗಿಸಿ ಸ್ವಾಸ್ಥ್ಯ ಜೀವನ ನಡೆಸಬಯಸುವವರಿಗೆ ಅವಕಾಶ ಕಲ್ಪಿಸಬಯಸಿದ್ದಾರೆ. 
        ಇವರ ವಿಚಾರಧಾರೆಯ ಕೆಲವು ಅಂಶಗಳು:
* ಸಮಾಜದಲ್ಲಿ ಕೆಲವು ಪರಿವರ್ತನೆಗಳು ಆಗಬೇಕಿದೆ. ಜನರು ಧರ್ಮಭೀರುಗಳಾಗಬೇಕು.
* ಸಂನ್ಯಾಸಿಗಳ ಅವಶ್ಯಕತೆ ಸಮಾಜಕ್ಕೆ ಇಲ್ಲ. ಬದಲಾಗಿ ಸುಸಂಘಟಿತವಾದ ಸಮಾಜವನ್ನು ಕಟ್ಟುವಂತಹ, ಜಾತಿರಹಿತ ಸಮಾಜವನ್ನು ಕಟ್ಟಬಲ್ಲ ಉತ್ಸಾಹಿ ತರುಣರ ಅವಶ್ಯಕತೆ ಇದೆ. ಅವರನ್ನೇ ಸಂನ್ಯಾಸಿಗಳೆಂದು ಕರೆದರೂ ತಪ್ಪಿಲ್ಲ.
* ಜಾತಿಯ, ರಾಜಕಾರಣಿಗಳ ಅಥವ ಸರಕಾರದ, ಅಧಿಕಾರಿಗಳ ಮುಲಾಜಿಗೆ ಒಳಪಟ್ಟು ಉತ್ಸಾಹ ತೋರುವ ಸಂನ್ಯಾಸಿಗಳಿಂದ ಸಮಾಜದಲ್ಲಿ ಸುಸಂಘಟನೆ ತರಲಾಗದು. ಯಾವ ಮತ್ತು ಯಾರ ಮುಲಾಜಿಗೂ ಒಳಗಾಗದ ಸಂನ್ಯಾಸಿಗಳು ಇರಬೇಕು. ಇಂತಹ ಉತ್ಕಟ ಅನಿಸಿಕೆಯನ್ನು ಸಾಕಾರಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿರುವೆ. ಆಗುತ್ತಾ ಇಲ್ಲ. ಆದರೂ ಸಂಕಲ್ಪ ದೂರವಾಗಿಲ್ಲ.
* ಸಂನ್ಯಾಸಿಗಳಲ್ಲಿ ಎರಡು ವಿಧ - ಸಾಧಕ ಸಂನ್ಯಾಸಿ, ಜ್ಞಾನಿ ಸಂನ್ಯಾಸಿ. ಜ್ಞಾನಿ ಸಂನ್ಯಾಸಿಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಸಾಧಕ ಸಂನ್ಯಾಸಿಗಳಿಗೆ ರಾಷ್ಟ್ರಹಿತ, ಸಮಾಜಹಿತ, ಧರ್ಮರಕ್ಷಣೆ ಮತ್ತು ಆತ್ಮವಿಕಾಸಗಳೆಂಬ ನಾಲ್ಕು ಕರ್ತವ್ಯಗಳಿವೆ. ಸಮಾಜಹಿತವೆಂದರೆ ಸಮಸ್ತ ಮಾನವಕುಲಹಿತ. ಸಮಾಜವೆಂದರೆ ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ಕ್ಷತ್ರಿಯ ಸಮಾಜ, ಇತ್ಯಾದಿ ಪರಿಗಣಿಸುವುದಲ್ಲ. ಸದ್ಯದ ಸಂನ್ಯಾಸಿಗಳು ಜಾತಿ ಆಧಾರಿತ ಸಮಾಜದ ಸುಸಂಘಟನೆಗಾಗಿ ದುಡಿಯುವಂತಹವರಾದರೆ ಆದಷ್ಟು ಬೇಗ ತಮ್ಮ ವಿಚಾರಧಾರೆಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯದು.
* ಯುವಕರ ವಿಚಾರದಲ್ಲಿ ಧಾರ್ಮಿಕ ಜವಾಬ್ದಾರಿ ಹೊತ್ತ ಗುರುಗಳು, ಆಚಾರ್ಯರು, ಸಂನ್ಯಾಸಿಗಳು ಅವರನ್ನು ಅರ್ಥ ಮಾಡಿಕೊಂಡು, ಅವರಿಗೆ ಅರ್ಥವಾಗುವ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಯುವಪೀಳಿಗೆಗೆ ಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ.
* ದೀನ ದಲಿತ, ಕಡುಬಡವ ಮಕ್ಕಳಿಗೆ ಸಂಸ್ಕಾರ, ಶಿಕ್ಷಣಗಳನ್ನು ಉಚಿತವಾಗಿ ನೀಡುವ ಪ್ರಯತ್ನವನ್ನು ಪ್ರತಿ ಯುವಕ-ಯುವತಿಯರು, ಸಂನ್ಯಾಸಿಗಳು ಯಾವುದೇ ರೀತಿಯಲ್ಲಿ ಮಾಡಬೇಕು.
* ಮೌಲ್ಯಗಳ ಅಧಃಪತನದಿಂದಾಗಿ ಜನರಲ್ಲಿ ಸುಳ್ಳು, ವಂಚನೆ. ಮೋಸಗಳು ಇವೆ, ಇದರಿಂದಾಗಿ ಅಸತ್ಯದ ಅನುಸರಣೆ ಮಾಡುತ್ತಾರೆ, ಸತ್ಯವನ್ನು ದೂರ ಮಾಡುತ್ತಾರೆ. ಸತ್ಯಕ್ಕೆ ಕುಂದಿಲ್ಲ. ಶಾಸ್ತ್ರಾಧ್ಯಯನ, ಶಾಸ್ತ್ರ ಪರಂಪರೆ ಇದು ಒಬ್ಬಿಬ್ಬರ ಕೊಡುಗೆಯಲ್ಲ. ಸಹಸ್ರಾರು ವರ್ಷಗಳ, ಸಹಸ್ರಾರು ಜನರ ಶ್ರಮಕ್ಕೆ ವೈಜ್ಞಾನಿಕತೆಯಿದೆ, ವಿಶ್ಲೇಷಣೆ ಇದೆ, ಕರ್ತವ್ಯವೂ ಇದೆ. ಪ್ರಮಾಣರಹಿತವಾದ ಇತರ ಮಾರ್ಗಗಳನ್ನು ಜನರು ಅನುಸರಿಸುತ್ತಾರೆಂದರೆ ಇದಕ್ಕೆ ಮೌಲ್ಯದ ಅಧಃಪತನವೇ ಕಾರಣ. ಕ್ರಮೇಣ ಇದರಲ್ಲಿ ಕೊರತೆ ಕಾಣುವ ಜನರು ಇದರಿಂದ ದೂರ ಸರಿಯುತ್ತಾರೆ. ಸತ್ಯ ತಲೆಯೆತ್ತುತ್ತದೆ. 
     ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ೨೫ರಿಂದ ೩೦ರವರೆಗೆ ಪೂಜ್ಯರು ಭಗವದ್ಗೀತೆಯ ಮತ್ತು ಉಪನಿಷತ್ ಕುರಿತು ನಡೆಸಿಕೊಡಲಿರುವ ಪ್ರವಚನಗಳು ಆಸಕ್ತರಿಗೆ ಮಾರ್ಗದರ್ಶಿಯಾಗಲಿರುವುದರಲ್ಲಿ ಅನುಮಾನವಿಲ್ಲ.

-ಕ.ವೆಂ.ನಾಗರಾಜ್, 

(ಆಧಾರ: ಸ್ವಾಮಿ ಸುವ್ರತಾನಂದ ಸರಸ್ವತಿಯವರ 'ಚಿದ್ರೂಪ ದರ್ಶನ')
     

ಭಾನುವಾರ, ಜುಲೈ 7, 2013

ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸ


     ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ನಡೆದ ಬಾಲಶಿಬಿರದಲ್ಲಿ ಉತ್ಸಾಹದಿಂದ ಪಾಲುಗೊಂಡಿದ್ದ ಮಕ್ಕಳು ವೇದಾಭ್ಯಾಸ ಮಾಡುತ್ತಿರುವುದು. 'ದುಡಿದು ತಿನ್ನಬೇಕು, ಸೋಮಾರಿಗಳು ಆಹಾರದ ಕೊಲೆಗಾರರು' ಎಂಬರ್ಥದ ಮಂತ್ರ ಹೇಳುತ್ತಿರುವ ಪುಟಾಣಿಗಳು!

ಶುಕ್ರವಾರ, ಜುಲೈ 5, 2013

ವೇದೋಕ್ತ ಜೀವನ ಶಿಬಿರ

ವೇದಭಾರತೀ, ಹಾಸನ

ವೇದೋಕ್ತ ಜೀವನ ಶಿಬಿರ

ಆಗಸ್ಟ್ 23,24 ಮತ್ತು 25

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ವಿಶ್ವನಾಥ್ ಕಿಣಿ-ಪುಣೆ 
2. ಮೋಹನ್ ಕುಮಾರ್, ನಂಜನ ಗೂಡು
3.ಗುರುಪ್ರಸಾದ್, ಭದ್ರಾವತಿ
4. ಮಹೇಶ್, ಭದ್ರಾವತಿ
5. ಶಿವಕುಮಾರ್, ಬೆಂಗಳೂರು
6. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
7. ವಿನಯ್ ಕಾಶ್ಯಪ್, ಬೆಂಗಳೂರು
8 .ಶರಣಪ್ಪ, ಗದಗ್
9. ವಿಜಯ್ ಹೆರಗು, ಬೆಗಳೂರು
10. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
11. ಕೆ.ಜಿ.ಕಾರ್ನಾಡ್,ಊರು ತಿಳಿಸಿಲ್ಲ.

ಹಾಸನ ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ಕವಿ ನಾಗರಾಜ್
2. ಶ್ರೀನಿವಾಸ್, AIR
3. ಹರಿಹರಪುರಶ್ರೀಧರ್
4. ಶ್ರೀ ಹರ್ಷ
5. ಚಿನ್ನಪ್ಪ
6. ಅಶೋಕ್
7. ನಟರಾಜ್ ಪಂಡಿತ್
8. ಶ್ರೀ ನಾಥ್        
9. ಸತೀಶ್
10.ಲೋಕೇಶ್
11.ಆದಿಶೇಷ್
12.ಕೇಶವಮೂರ್ತಿ
13.ಬೈರಪ್ಪಾಜಿ, 

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 

ವಿಶೇಷ:
1. ಸ್ಥಳೀಯವಾಗಿ ಪತ್ರಿಕೆಗಳಿಗೆ ಇನ್ನೂ ಮಾಹಿತಿ ನೀಡಿಲ್ಲ
2. ಇನ್ನೂ  ಕರಪತ್ರ ಮುದ್ರಣವಾಗಿಲ್ಲ
3. ಕೇವಲ ವೆಬ್ ಸೈಟ್ ಮಾಹಿತಿಯಿಂದ ಅಗತ್ಯ ಸಂಖ್ಯೆ ತಲುಪಿಯಾಗಿದೆ. 
4. ಸಂಜೆ ನಡೆಯುವ ಉಪನ್ಯಾಸಕ್ಕೆ    ಸಾರ್ವಜನಿಕರಿಗೂ ಪ್ರವೇಶ ವಿರುವುದರಿಂದ ಸ್ಥಳೀಯರು ಉಪನ್ಯಾಸದ ಲಾಭ 
    ಪಡೆಯುತ್ತಾರೆ. ಶಿಬಿರಕ್ಕಾಗಿ ಪ್ರಚಾರವನ್ನೇನೂ ಮಾಡುವುದಿಲ್ಲ.

ಗುರುವಾರ, ಜೂನ್ 27, 2013

ವೇದೋಕ್ತ ಜೀವನ ಶಿಬಿರ ಮಾಹಿತಿ

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1.ಶ್ರೀ ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2.ಶ್ರೀ ಸುಹಾಸ್ ದೇಶಪಾಂಡೆ,ಬೆಂಗಳೂರು
3.ಶ್ರೀ ಸುಬ್ರಹ್ಮಣ್ಯ, ಬೆಂಗಳೂರು
4.ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5.ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6.ಶ್ರೀ ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ ಮೂಲಕ ನೊಂದಾಯಿಸಿಕೊಂಡಿರುವವರು
1.ಶ್ರೀ ವಿಶ್ವನಾಥ್ ಕಿಣಿ-ಪುಣೆ 
2.ಶ್ರೀ ಮೋಹನ್ ಕುಮಾರ್, ನಂಜನ ಗೂಡು
3.ಶ್ರೀಗುರುಪ್ರಸಾದ್, ಭದ್ರಾವತಿ
4.ಶ್ರೀ ಮಹೇಶ್, ಭದ್ರಾವತಿ
5.ಶ್ರೀ ಶಿವಕುಮಾರ್, ಬೆಂಗಳೂರು
6.ಶ್ರೀ ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 

ಸೋಮವಾರ, ಜೂನ್ 24, 2013

ವೇದೋಕ್ತಜೀವನ ಶಿಬಿರ

ಓಂ
ವೇದಭಾರತೀ,ಹಾಸನ,

ವೇದೋಕ್ತಜೀವನ ಶಿಬಿರ

ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ

ಮಾರ್ಗದರ್ಶನ:
 ವೇದಾಧ್ಯಾಯೀ ಸುಧಾಕರಶರ್ಮ
ಬೆಂಗಳೂರು

ಸ್ಥಳ:  ಸಹೃದಯ  ಮಂದಿರ,ಶ್ರೀ ಶಂಕರಮಠದ ಆವರಣ,ಹಾಸನ

ಶುಲ್ಕ: 500:00 ರೂಗಳು

ಮೊದಲು ಬಂದ ಕೇವಲ 40  ಜನರಿಗೆ ಅವಕಾಶ

ನೊಂದಾಯಿಸಿಕೊಳ್ಳಲು ಕಡೆಯದಿನ 15.07.2013

ಹರಿಹರಪುರಶ್ರೀಧರ್-9663572406             ಕವಿನಾಗರಾಜ್-9448501804
---------------------------------------------------------------------
ತಾತ್ಕಾಲಿಕ ಸಮಯ ಸಾರಿಣಿ [ಶ್ರೀ ಸುಧಾಕರಶರ್ಮರ ಸಲಹೆಯ ಮೆರೆಗೆ ತಿದ್ದುಪಡಿಗೆ ಒಳಪಟ್ಟಿದೆ]

ಪ್ರಾತ:ಕಾಲ

5:00 ಉತ್ಥಾನ

5:00 ರಿಂದ 6:30  ಶೌಚ-ಸ್ನಾನ-ಪಾನೀಯ

6:30 ರಿಂದ 7:30 ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

7:30 ರಿಂದ 8:30  ಯೋಗ-ಪ್ರಾಣಾಯಾಮ[ಶ್ರೀ ಪಾರಸ್ ಮಲ್]

8:30 ರಿಂದ 9:30  ಉಪಹಾರ

9:30 ರಿಂದ 10:20 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-1  

10:30 ರಿಂದ 11:20 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-2  

11:30 ರಿಂದ 12:30  ವೇದಾಭ್ಯಾಸ [ಶ್ರೀ ವಿಶ್ವನಾಥ ಶರ್ಮ]

ಮಧ್ಯಾಹ್ನ

12:30 ರಿಂದ 3:00  ಭೋಜನ ವಿಶ್ರಾಂತಿ

3:00 ರಿಂದ 3:40 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-3

3:50 ರಿಂದ 4:30 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-4

4:30 ರಿಂದ 5:00- ಪಾನೀಯ

5:00 ರಿಂದ 7:00   ವೇದಾಭ್ಯಾಸ ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

ರಾತ್ರಿ

7:00 ರಿಂದ 8:00  ಉಪನ್ಯಾಸ [ ಶ್ರೀ ಸುಧಾಕರಶರ್ಮ] [ಸಾರ್ವಜನಿಕರಿಗೂ ಅವಕಾಶ ವಿರುತ್ತೆ]

8:00 ರಿಂದ 9:00 ಭೋಜನ

9:00 ರಿಂದ 10:00 ಅನೌಪಚಾರಿಕ


-: ಶಿಬಿರದ ವಿಶೇಷಗಳು :-

*   ಬೆಳಿಗ್ಗೆ ಮತ್ತು ಸಂಜೆ ವೈದಿಕ ಸಂಧ್ಯೋಪಾಸನಾ ಮತ್ತು ಅಗ್ನಿಹೋತ್ರ

*   ಪ್ರಾಣಾಯಾಮ ಮತ್ತು ಯೋಗಾಭ್ಯಾಸ

*   ವೇದ ಮಂತ್ರಾಭ್ಯಾಸ

*   ವೇದೋಕ್ತ ಜೀವನ ಪಥ-ಚಿಂತನೆ

*   ನಮ್ಮ ಅನುಮಾನಗಳಿಗೆ ಶ್ರೀ ಶರ್ಮರಿಂದ ಪರಿಹಾರ

*   ಶಿಬಿರ ಸಮಯ:  ಪ್ರಾತ: ಕಾಲ 6:00 ರಿಂದ ರಾತ್ರಿ 8:00

*   ವ್ಯವಸ್ಥೆ:  ವಸತಿ: ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ.  ಸಾತ್ವಿಕ ಆಹಾರ -ವೇದೋಕ್ತ ವಿಚಾರ.

*   ಶಿಬಿರದಲ್ಲಿ ವೇದ ಸಾಹಿತ್ಯ ಮಾರಾಟಕ್ಕೆ ಲಭ್ಯ.

*  ಹೊರ ಊರುಗಳಿಂದ ಬಂದು ಪಾಲ್ಗೊಳ್ಳುವ  ಸ್ತ್ರೀ ಮತ್ತು ಪುರುಷರಿಗೆ  ಪ್ರತ್ಯೇಕವಾದ ಮಲಗುವ ಮತ್ತು ಸ್ನಾನ- ಶೌಚ    
     ಗೃಹದ  ವ್ಯವಸ್ಥೆ ಇರುತ್ತದೆ ಹೊರತೂ ಒಬ್ಬೂಬ್ಬರಿಗೂ ಪ್ರತ್ಯೇಕ ಕೊಠಡಿಗಳಿರುವುದಿಲ್ಲ.

*   ವೇದೋಕ್ತ ಜೀವನ ಶಿಬಿರವು ವಿಹಾರಕ್ಕಾಗಿ ಅಲ್ಲ.

*   ನಿಮ್ಮ ಯಾವುದೇ ಸಂದೇಹಗಳನ್ನು vedasudhe@gmail.com ಗೆ ಮೇಲ್ ಮಾಡಿ ತಿಳಿಸಿದರೆ ಉತ್ತರಿಸಲಾಗುವುದು.

* ಶಿಬಿರಾರ್ಥಿಗಳಿಗೆ ವಿವರವಾದ ಸೂಚನೆಯನ್ನು ಮುಂದೆ ಪ್ರಕಟಿಸಲಾಗುವುದು.ಶಿಬಿರಾರ್ಥಿಗಳು ತಮ್ಮ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು vedasudhe@gmail.com ಗೆ ಮೇಲ್ ಮಾಡಬೇಕಾಗಿ ಕೋರಿಕೆ.


* ಹೊರ ಊರಿನಿಂದ ಶಿಬಿರಾರ್ಥಿಗಳು [ 15 ಕ್ಕೆ ಮಿತಿಗೊಳಿಸಲಾಗುವುದು] 
1.ಶ್ರೀ ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2.ಶ್ರೀ ವಿಶ್ವನಾಥ್ ಕಿಣಿ-ಪುಣೆ 
3.ಶ್ರೀ ಮೋಹನ್ ಕುಮಾರ್, ನಂಜನ ಗೂಡು
4.ಶ್ರೀಗುರುಪ್ರಸಾದ್, ಭದ್ರಾವತಿ
5.ಶ್ರೀ ಮಹೇಶ್, ಭದ್ರಾವತಿ
6.ಶ್ರೀ ಗಿರೀಶ್ ನಾಗಭೂಷಣ್, ಬೆಂಗಳೂರು
7.ಶ್ರೀ ಶಿವಕುಮಾರ್, ಬೆಂಗಳೂರು
8.ಶ್ರೀ ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
9.ಶ್ರೀ ಸುಬ್ರಹ್ಮಣ್ಯ, ಬೆಂಗಳೂರು
10.ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
11.ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
12.ಶ್ರೀ ಸುಭಾಶ್ ದೇಶಪಾಂಡೆ,ಬೆಂಗಳೂರು
ಪ್ರವೇಶಾವಕಾಶ:
1. ಹಾಸನ: 15
2. ಚನ್ನರಾಯ ಪಟ್ನ: 10

ಮಂಗಳವಾರ, ಮೇ 14, 2013

ಸಾಧನಾಪಂಚಕ




     ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವಿದಾಗಿದೆ. 

ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನ್ಠುಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

     ಪ್ರತಿನಿತ್ಯ ವೇದಾಧ್ಯಯನ ಮಾಡು; ವೇದ ವಿಧಿತ ಕರ್ಮಗಳನ್ನು ಶ್ರದ್ಧೆಯಿಂದ ನಿರ್ವಹಿಸು; ಮಾಡುವ ಎಲ್ಲಾ ಕೆಲಸಗಳನ್ನು ಭಗವದಾರಾಧನೆಯೆಂದು ಸಮರ್ಪಿಸು; ಕಾಮ್ಯ ಕರ್ಮಗಳನ್ನು (ಮನಸ್ಸಿನ ಸ್ವಾಧೀನ ತಪ್ಪಿಸುವ ಕಾಮನೆಗಳು) ತ್ಯಜಿಸು; ಅಂತರಂಗದಲ್ಲಿ ತುಂಬಿರುವ ಪಾಪರಾಶಿಯನ್ನು ತೊಳೆದುಹಾಕು; ಇಂದ್ರಿಯ ಸುಖಭೋಗಗಳು ದೋಷಪೂರಿತವೆಂದು ಗುರುತಿಸು; ಸ್ವಸ್ವರೂಪವನ್ನು ಅರಿಯಲು ಪ್ರಯತ್ನಿಸು; ಶರೀರ ಮೋಹದ ಸಂಕೋಲೆಯಿಂದ ಬಿಡಿಸಿಕೊಂಡು ಸಾಧನಾಪಥದಲ್ಲಿ ಸಾಗು.

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ 
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

     ಜ್ಞಾನಿಗಳ ಸಹವಾಸದಲ್ಲಿರು; ಭಗವಂತನಲ್ಲಿ ದೃಢ ಭಕ್ತಿಯಿರಿಸು; ಪ್ರಶಾಂತತೆ ಮುಂತಾದ ಗುಣಗಳನ್ನು ಬೆಳೆಸಿಕೋ; ಸ್ವಾರ್ಥಪರ ಕಾಮಕರ್ಮಗಳಲ್ಲಿ ಆಸಕ್ತಿ ತ್ಯಜಿಸು; ಸದ್ವಿದ್ವಾಂಸರ (ಗುರುಗಳ) ಆಶ್ರಯ ಪಡೆ; ಪ್ರತಿದಿನ ಸದ್ಗುರು ಪಾದಸೇವೆ ಮಾಡು; ಬ್ರಹ್ಮನನ್ನು ಸೂಚಿಸುವ ಏಕಾಕ್ಷರ 'ಓಂ'ಕಾರ ತಿಳಿಯಲು ಪ್ರಯತ್ನಿಸು; ಉಪನಿಷದ್ ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳು.

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

     ಉಪನಿಷತ್ತಿನ ವಾಕ್ಯಗಳ ಅರ್ಥ ಕುರಿತು ಚಿಂತಿಸು; ಉಪನಿಷತ್ತಿನ ನಿಜಜ್ಞಾನವನ್ನು ಆಶ್ರಯಿಸು; ವಿತಂಡವಾದದಿಂದ ದೂರವಿರು; ಉಪನಿಷತ್ತಿಗೆ ಪೂರಕವಾದ ತರ್ಕದೊಂದಿಗೆ ಇರು; ಬ್ರಹ್ಮಾನುಭವದಲ್ಲಿ ಒಂದಾಗು; ಎಂದಿಗೂ ಗರ್ವಪಡದಿರು; ಶರೀರದೊಂದಿಗೆ ನಿನ್ನನ್ನು ಪರಿಭಾವಿಸಿಕೊಳ್ಳದಿರು ; ವಿದ್ವಾಂಸರೊಡನೆ ವಾದ ಮಾಡುವ ಪ್ರವೃತ್ತಿ ತೊರೆದುಬಿಡು.

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

     ಹಸಿವಿದ್ದರೆ, ಅಸ್ವಸ್ಥತೆಯಿದ್ದರೆ ಪರಿಹರಿಸಿಕೋ; ಪ್ರತಿದಿನ ಭಿಕ್ಷೆಯನ್ನು (ಆಹಾರ) ಔಷಧಿಯಂತೆ ಸೇವಿಸು; ರುಚಿಕರವಾದ ಆಹಾರಕ್ಕೆ ಹಂಬಲಿಸದಿರು; ತಾನಾಗಿ ಒದಗಿ ಬಂದುದರಲ್ಲಿ ತೃಪ್ತಿಪಡು; ಶೀತ-ಉಷ್ಣ ಮುಂತಾದುವುಗಳನ್ನು ಸಹಿಸು; ಅನುಚಿತ ಮಾತುಗಳನ್ನು ಆಡದಿರು; ನಿರ್ಲಿಪ್ತಭಾವವನ್ನು ಹೊಂದು; ಜನರ ಕೃಪೆ ಮತ್ತು ನಿಷ್ಠುರಗಳನ್ನು ಗಮನಿಸದಿರು.  

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

     ಏಕಾಂತದಲ್ಲಿ ಸುಖವನ್ನು ಅರಸು; ಪರಮಾತ್ಮನಲ್ಲಿ ಚಿತ್ತವನ್ನು ಲೀನಗೊಳಿಸು (ಸಮಾಧಿ); ಸರ್ವವ್ಯಾಪಿ ಪೂರ್ಣಾತ್ಮನನ್ನು ಎಲ್ಲೆಡೆಯಲ್ಲೂ 'ದರ್ಶಿಸು'; ಕಾಣುವ ದೃಶ್ಯಗಳು, ಅನುಭವಗಳು ಮನಸ್ಸಿನ ಭ್ರಮೆಯೆಂಬುದನ್ನು ಮನಗಾಣು; ಹಿಂದಿನ ಕರ್ಮಗಳ ಫಲವನ್ನು ಅನುಭವಿಸು; ಮುಂದೊದಗಬಹುದಾದ ಫಲಗಳಿಂದ ಧೃತಿಗೆಡದಿರು; ಪ್ರಾರಬ್ಧದ ಕರ್ಮಫಲಗಳನ್ನು ಅನುಭವಿಸಿ ಕಳೆದುಕೋ; ಬ್ರಹ್ಮಾನುಭವದಲ್ಲಿ  ಸ್ಥಿತನಾಗಿರು. 

-ಕ.ವೆಂ.ನಾಗರಾಜ್.