tag:blogger.com,1999:blog-8713624603218732102.post5081639061785927301..comments2023-05-29T03:13:24.402-07:00Comments on ವೇದ ಜೀವನ: ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೭kavinagarajhttp://www.blogger.com/profile/03441731601299137224noreply@blogger.comBlogger5125tag:blogger.com,1999:blog-8713624603218732102.post-61675988362272790152014-02-22T02:04:55.715-08:002014-02-22T02:04:55.715-08:00Edurkala Ishwar Bhat
Very good post by shree Kavi...Edurkala Ishwar Bhat
Very good post by shree Kavi Nagaraj and related information by Shree Durgaprasad Menda -- Unfortunately the "Varna" word and the systems itself was totally misused by politicians, all the time, Right from mahabhaarata where, "DuryOdhana" used this word "Shoodra" to Mahaamahima "Vidura" many a time.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-69182381624349847032014-02-15T19:11:06.716-08:002014-02-15T19:11:06.716-08:00ಉತ್ತಮ ಪ್ರತಿಕ್ರಿಯೆಗೆ ವಂದನೆಗಳು, ದುರ್ಗಾಪ್ರಸಾದಮೆಂಡರೇ. ...ಉತ್ತಮ ಪ್ರತಿಕ್ರಿಯೆಗೆ ವಂದನೆಗಳು, ದುರ್ಗಾಪ್ರಸಾದಮೆಂಡರೇ. ನಿಜವಾದ ಅರ್ಥದಲ್ಲಿ ಬ್ರಾಹ್ಮಣರೆನಿಸಿದವರು ನೀವು ಹೇಳಿದಂತೆ ಈಗಲೂ ಇದ್ದಾರೆ. ಅವರನ್ನು, ಅಂತಹವರನ್ನು ಪ್ರೋತ್ಸಾಹಿಸುವ ಕೆಲಸ ಪ್ರಜ್ಞಾವಂತರಿಂದ ಆಗಬೇಕಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-63044248282035797172014-02-15T19:10:31.109-08:002014-02-15T19:10:31.109-08:00Durgaprasad Menda
ವಸ್ತುಶಃ ವರ್ಣಗಳು ಗುಣಕರ್ಮಾನುಸಾರವೇ...Durgaprasad Menda
ವಸ್ತುಶಃ ವರ್ಣಗಳು ಗುಣಕರ್ಮಾನುಸಾರವೇ ಸ್ವಾಬಾವಿಕವಾಗಿಯೇ ಭಗವಂತನೇ ಮಾಡಿದ ಸಾಮಾಜಿಕ ವಿಂಗಡಣೆ. ಎಲ್ಲರೂ ತಮ್ಮ ತಮ್ಮ ಗುಣಕ್ಕನುಸಾರವಾಗಿ ಕರ್ಮಗಳನ್ನು ಎಸಗಲು ಬದ್ಧರಾಗಿರುತ್ತಾರೆ. ಆದರೆ ಈ ತೆರನಾದ ಗುಣ ಕರ್ಮಾನುಸಾರವಾದ ವರ್ಣಗಳನ್ನು ಆಚರಿಸದೆ ಕೇವಲ ಒಬ್ಬಾತನ ಹುಟ್ಟನ್ನೇ ಆಧಾರವಾಗಿರಿಸಿ "ಇವ ಬ್ರಾಹ್ಮಣ, ಇವ ಶೂದ್ರ" ಎಂದು ಪರಿಗಣಿಸ ತೊಡಗಿದ್ದೇ ವೈದಿಕ ವರ್ಣಾಶ್ರಮ ಪದ್ಧತಿಯ ಅವನತಿಗೆ ಕಾರಣವಾಯಿತು.
ಈ ರೀತಿಯಾಗಿ ಬ್ರಾಹ್ಮಣ ಎನಿಸಿಕೊಂಡವರು ಶೂದ್ರರೆನಿಸಿಕೊಂಡವರನ್ನು ಕೀಳು ಎಂಬುದಾಗಿ ಕಾಣತೊಡಗಿದರು. ಯಥಾರ್ಥದಲ್ಲಿ ಹೀಗೆ ಕೀಳರಿಮೆಯುಳ್ಳವರು ಬ್ರಾಹ್ಮಣರೇ ಅಲ್ಲ. ಅವರೇ ನಿಜವಾದ ಶೂದ್ರರು. ಹೀಗೆ ಶೂದ್ರರನ್ನು ಕೀಳಾಗಿ ಕಂಡು ತಾರತಮ್ಯ ನಡೆಸಿದಾಗ ಸಮಾಜದಲ್ಲಿ ವರ್ಣಾಶ್ರಮದ ಬದಲಿಗೆ ಜಾತಿ ಪದ್ದತಿಯು ತಲೆಯೆತ್ತಿತು. ಈ ಜಾತಿ ಪದ್ದತಿಯು ಎಷ್ಟೊಂದು ಸಂಕೀರ್ಣವಾಗಿತ್ತೆಂದರೆ ಕೆಳವರ್ಗದ ಜನರಿಗೆ ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗಳು ಸಾಮಾನ್ಯವಾಗಿಬಿಟ್ಟಿತು.
ಇಂತಹಾ ಸಂದರ್ಭದಲ್ಲಿ ಬದಲೀ ವ್ಯವಸ್ಥೆಯೋ ಎಂಬಂತೆ ಕ್ರೈಸ್ತ ಹಾಗೂ ಮುಸಲ್ಮಾನ ಧರ್ಮೀಯರು ಇಲ್ಲಿಗೆ ಬಂದು ಶೋಷಣೆಗೊಳಗಾದವರನ್ನು ಮತಾಂತರಿಸಿಕೊಂಡರು. ಹಾಗಾಗಿ ನಮ್ಮ ಸನಾತವಾದ ವರ್ಣಾಶ್ರಮ ಪದ್ಧತಿಯನ್ನು ಕಡೆಗಣಿಸಿ, ಕೇವಲ ಹುಟ್ಟಿನ ಆಧಾರದ ಮೇಲೆ ವರ್ಣವನ್ನು ಪರಿಗಣಿಸಿ ಸಾಮಾಜಿಕ ಶೋಷಣೆ ಮಾಡಲು ತೊಡಗಿದುದರಿಂದಲೇ ಇಂದು ಜಾತಿ ಪದ್ಧತಿ ಹಾಗೂ ಮತೀಯ ಘರ್ಷಣೆಗಳು ತಲೆದೋರಿವೆ ಎಂದು ಹೇಳುವುದು ಉತ್ಪ್ರೇಕ್ಷೆಯಾಗಲಾರದು.
ಯಥಾರ್ಥದಲ್ಲಿ ಬ್ರಾಹ್ಮಣ ಎಂದರೆ ಯಾರು? ಹುಟ್ಟಿನಿಂದ ಎಲ್ಲರೂ ಶೂದ್ರರೇ ಆಗಿದ್ದರೂ, ಯಾರು "ಅಥಾತೋ ಬ್ರಹ್ಮ ಜಿಜ್ಞಾಸಾ:" ಅಂದರೆ ಯಾರ ಮನದಲ್ಲಿ ಬ್ರಹ್ಮ ಜಿಜ್ಞಾಸೆ ಹುಟ್ಟುತ್ತದೋ ಅವರು ಎರಡನೇ ಹುಟ್ಟನ್ನು ಪಡೆಯುತ್ತಾರೆ. ಅಲ್ಲಿಗೆ ದ್ವಿಜತ್ವವು ಪ್ರಾಪ್ತವಾಗುತ್ತದೆ. ಆದರೆ ಈ ತೆರನಾದ ಜಿಜ್ಞಾಸೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ವೆದಾಧ್ಯಾಯನ ಅತ್ಯಗತ್ಯ. ಹಾಗಾಗಿ ಯಾರು ವೇದಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿರುತ್ತಾರೋ ಅವರು ವಿಪ್ರರು ಎಂದಾಗುತ್ತಾರೆ. ಆದರೆ ದ್ವಿಜತ್ವವು ಪ್ರಪ್ತವಾಗದೆ ಕೇವಲ ಅಧ್ಯನದ ಉದ್ದೇಶದಿಂದ ವೇದಗಳನ್ನು ಓದಿದವರನ್ನು ವಿಪ್ರರು ಎಂದು ಕರೆಯಲಾಗದು. ಮೊದಲು ಬ್ರಹ್ಮ ಜಿಜ್ಞಾಸೆ ಆಮೇಲೆ ವೇದಾಧ್ಯಾಯನ. ಆಗ ವಿಪ್ರನು ಹುಟ್ಟಿಕೊಳ್ಳುತ್ತಾನೆ. ಆದರೆ ವೇದಗಳನ್ನು ಅಧ್ಯಯನ ಮಾಡಿದರೆ ಸಾಲದು. ಅದನ್ನು ಆಚರಿಸಬೇಕು. ಆಗ ಬ್ರಹ್ಮ ಜ್ಞಾನವು ತನ್ನಿಂದ ತಾನಾಗಿಯೇ ಹೃದಯದಲ್ಲಿ ಪ್ರಕಾಶಗೊಳ್ಳುತ್ತದೆ. ಅಲ್ಲಿಗೆ ಅವನು ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ. ಈಗ ಹೇಳಿ ನಮ್ಮ ಇಂದಿನ ಸಮಾಜದಲ್ಲಿ ಈ ತೆರನಾದ ಯಥಾರ್ಥದ ಬ್ರಾಹ್ಮಣರು ಎಷ್ಟು ಮಂದಿ ಇದ್ದಾರೆ? ಕೇವಲ ಹುಟ್ಟನ್ನೇ ಆಧಾರವಾಗಿರಿಸಿ ನಾನು ಬ್ರಾಹ್ಮಣ ನೀನು ಶೂದ್ರ ಎಂದು ಬೀಗುವುದು ಕ್ಷುಲ್ಲಕವಾಗುತ್ತದೆ.
ಹಾಗಂತ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ್ದು ವ್ಯರ್ಥ ಎಂದೇನಿಲ್ಲ. ಯಥಾರ್ಥದ ಬ್ರಾಹ್ಮಣನಿಗೆ ಮಗನಾಗಿ (ದಯವಿಟ್ಟು ಗಮನಿಸಿ- ಯಥಾರ್ಥದ ಬ್ರಾಹ್ಮಣನಿಗೆ ಮಗನಾಗಿ) ಹುಟ್ಟುವುದು ಕೂಡಾ ಪೂರ್ವ ಕರ್ಮದ ಪುಣ್ಯ ವಿಶೇಷದ ಫಲವೇ ಹೌದು. ಯಾಕೆಂದರೆ ನಿಜಾರ್ಥದ ಬ್ರಾಹ್ಮಣನ ಮನೆಯಲ್ಲಿ ಜನಿಸಿದವನಿಗೆ ತಾನು ಕೂಡಾ ನಿಜಾರ್ಥದ ಬ್ರಾಹ್ಮಣನಾಗುವಲ್ಲಿ ಹೆಚ್ಚಿನ ಅವಕಾಶಗಳಿವೆ. ಆದರೆ ಅದಕ್ಕಾಗಿ ಅವನು ಕೂಡಾ ದ್ವಿಜತ್ವ ಹಾಗೂ ವಿಪ್ರತ್ವಗಳನ್ನು ಸಂಪಾದಿಸಲೇ ಬೇಕು.
ಸಮಾಜದದ ಹಿತದೃಷ್ಟಿಯಿಂದ ಬ್ರಾಹ್ಮಣರ ಮಾರ್ಗದರ್ಶನದಲ್ಲಿ ಕ್ಷತ್ರಿಯರು ಆಡಳಿತವನ್ನು ನಡೆಸಬೇಕು. ಆದರೆ ಮಾರ್ಗದರ್ಶನ ನೀಡಬೇಕಿದ್ದ ಬ್ರಾಹ್ಮಣರೇ ನಿಜಾರ್ಥದಲ್ಲಿ ಬ್ರಾಹ್ಮಣರಲ್ಲದೇ ಇದ್ದಾಗ ಆಡಳಿತವು ಭ್ರಷ್ಟವಾಗಿ ಸಮಾಜವು ಸನಾತನವಾದ ಧರ್ಮಮಾರ್ಗದಿಂದ ಪತನಗೊಳ್ಳುತ್ತದೆ. ಶರೀರದಲ್ಲಿ ತಲೆ ಸರಿಯಿದ್ದರೆ ಇತರ ಇಂದ್ರಿಯಗಳು ಕುಂಟಿತವಾಗಿದ್ದರೂ ಆ ವ್ಯಕ್ತಿಯು ಜೀವನ ಸಾಗಿಸಬಲ್ಲನು. ಅಂತೆಯೇ ಸಮಾಜವು ಕೂಡಾ. ಒಟ್ಟಿನಲ್ಲಿ ಕಲಿಪ್ರಭಾವದಿಂದ ವರ್ಣಾಶ್ರಮ ವ್ಯವಸ್ಥೆಯು ಶಿಥಿಲವಾಗಿದೆ ಎನ್ನುವುದು ಸ್ಪಷ್ಟ.
ಆದಾಗ್ಯೂ ಇಂದಿಗೂ ಕೂಡಾ ಯಥಾರ್ಥವಾದ ವರ್ಣಾಶ್ರಮ ಪದ್ಧತಿಯನ್ನು ಅನುಸರಿಸುವ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ನಿಜಾರ್ಥದ ಬ್ರಾಹ್ಮಣರು ಜಾತಿ ಬ್ರಾಹ್ಮಣರ ಅಬ್ಬರದ ನಡುವೆ ಕಾಣದೆ ಇರುವುದು ನಮ್ಮ ಸಮಾಜದ ದೌರ್ಭಾಗ್ಯವೆ ಹೌದು. ವರ್ಣಾಶ್ರಮ ವ್ಯವಸ್ಥೆಯನ್ನು ಯಥಾರ್ಥವಾಗಿ ಅನುಸರಿಸಲು ನಾವೆಲ್ಲರೂ ಮನಮಾಡಿ ನಮ್ಮ ಬಿಗುಮಾನವನ್ನು ಬದಿಗಿರಿಸಿದರೆ ಈ ಸನಾತನ ವ್ಯವಸ್ಥೆಯು ಪುನಃ ಉದ್ದೀಪನಗೊಳ್ಳುವಂತಾಗುತ್ತದೆ. ಹೀಗಾಗಲೆಂದು ನಾವೆಲ್ಲರೂ ಆಶಿಸೋಣವೇ ?
(ಇಲ್ಲಿ ವ್ಯಕ್ತವಾಗಿರುವ ನನ್ನ ಅನಿಸಿಕೆಗಳು ಯಾವುದೇ ಒಂದು ಪಂಗಡವನ್ನು ನೋವುಂಟುಮಾಡುವ ಉದ್ದೇಶದಿಂದ ಬರೆದುದಲ್ಲ. ಹಾಗೊಂದು ವೇಳೆ ಯಾರಿಗಾದರೂ ನೋವುಂಟಾಗಿದ್ದಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೇ ಅಯಾಚಿತವಾಗಿ ನಾನು ಕ್ಷಮೆಯಾಚಿಸುತ್ತೇನೆ.)kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-91128408316197989502012-03-24T22:19:53.877-07:002012-03-24T22:19:53.877-07:00ಧನ್ಯವಾದಗಳು, ರಾಮಭಟ್ಟರೇ.ಧನ್ಯವಾದಗಳು, ರಾಮಭಟ್ಟರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-13281460687594663572012-03-24T03:20:53.679-07:002012-03-24T03:20:53.679-07:00ಅವಲೋಕಿಸಿದ್ದೇನೆಅವಲೋಕಿಸಿದ್ದೇನೆAnonymoushttps://www.blogger.com/profile/08145546277580318496noreply@blogger.com